ಬಳ್ಳಾರಿ: ಮುಖ್ಯಮಂತ್ರಿಗಳು ರಾಜಕೀಯ ಕೊನೆಗಾಲದಲ್ಲಿಯಾದ್ರು ಸತ್ಯದ ಪರ ಧ್ವನಿಯಾಗಿಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ. ಬಳ್ಳಾರಿ ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ರಾಜಕೀಯ ಕೊನೆಗಾಲದಲ್ಲಿಯಾದ್ರು ಸತ್ಯದ ಪರ ಧ್ವನಿಯಾಗಿಲ್ಲ,
ಮಾಡಿರುವ ಪಾಪವಾದ್ರು ತೊಳೆದುಕೊಳ್ಳವ ಕಾರ್ಯ ಮಾಡಲಿ ಒಂದು ಸಾರಿ ವಕ್ಫ್ ಪ್ರಾಪರ್ಟಿ ಎಂದು ಘೋಸಿಸಿದರೇ ಅದು ಅಲ್ಲಾನ ಪ್ರಾಪರ್ಟಿ ಎಂದು ಸಚಿವ ಜಮೀರ್ ಅಹಮ್ಮದ್ ರಂದು ಉದ್ದಟತನದಿಂದ ಹೇಳ್ತಾರೆ ಕಾಂಗ್ರೇಸ್ ಒಲೈಕೆ ರಾಜಕಾರಣ ಬಿಟ್ರೇ ಮತ್ತೇನು ಮಾಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಸರ್ಕಾರ ಗ್ಯಾರಂಟಿ ನೀಡಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ ಆದರೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಸರಿಯಾಗಿ ಬರುತ್ತಿಲ್ಲ, ಹತ್ತು ಕೆಜಿ ಅಕ್ಕಿ ನೀಡುತ್ತಿಲ್ಲ ಸರಿಯಾಗಿ ಹಣವನ್ನು ನೀಡುತ್ತಿಲ್ಲ,
ಪಿಂಚಣಿದಾರರಿಗೆ ಗುಡ್ ನ್ಯೂಸ್: ಇನ್ನುಂದೆ ಮನೆಯಿಂದಲೇ “ಡಿಜಿಟಲ್ ಜೀವನ ಪ್ರಮಾಣ ಪತ್ರ” ಪಡೆಯಿರಿ!
ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುತ್ತಿಲ್ಲ, ಶಕ್ತಿಯೋಜನೆಯಿಂದ ಸಾರಿಗೆ ವ್ಯವಸ್ಥೆ ಹಾಳಾಗಿದೆ ದೂರದೃಷ್ಠಿಯ ಯಾವೊಂದು ಯೋಜನೆಯನ್ನು ಸರ್ಕಾರ ಜಾರಿಗೆ ತಂದಿಲ್ಲ. ಜನರಹಿತ ಮರೆತ ಸರ್ಕಾರದ ವಿರುದ್ದ ಜನರಿಗೆ ಅರಿವು ಮೂಡಿಸುವ ಕಾರ್ಯವಾಗುತ್ತೆ, ದಾರಿ ತಪ್ಪಿರುವ ಕಾಂಗ್ರೇಸ್ ಗೆ ಪಾಠ ಕಲಿಸುವ ಕಾರ್ಯವನ್ನು ಜನರು ಮಾಡಿದ್ದಾರೆ ಎಂದು ಹೇಳಿದರು.