ಬೆಂಗಳೂರು: ಅಧಿಕಾರಕ್ಕೆ ಬಂದ ಮೊದಲ ದಿನವೇ ಅನ್ನಭಾಗ್ಯ ಯೋಜನೆ ಕೊಟ್ಟಿದ್ದು ಸಿದ್ದರಾಮಯ್ಯ ಎಂದು ಆಹಾರ ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಮೊದಲ ದಿನವೇ ಅನ್ನಭಾಗ್ಯ ಯೋಜನೆ ಕೊಟ್ಟಿದ್ದು ಸಿದ್ದರಾಮಯ್ಯನವರು. ದೇಶದಲ್ಲಿ ಈ ಆಹಾರ ಭದ್ರತೆ ಕಾಯ್ದೆಯನ್ನು ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.
ಸಾರ್ವಜನಿಕರೇ ಗಮನಿಸಿ.. ನಿಮ್ಮ ಬಳಿ 500 ರೂಪಾಯಿ ನೋಟು ಇದ್ಯಾ..? ಕ್ಷಣಮಾತ್ರದಲ್ಲಿ ನೀವು ಆಗ್ಬೋದು ಮಿಲಿಯನೇರ್!
ಇನ್ನೂ ಬಿಎಸ್ ವೈ ಅಧಿಕಾರಕ್ಕೆ ಬಂದ್ಮೇಲೆ ಏಳರಿಂದ ಐದು ಕೆಜಿಗೆ ಇಳಿಸಿದ್ರು. ದೇಶದಲ್ಲಿ ಐದು ಕೋಟಿ ಎಂಟು ಲಕ್ಷ ಕಾರ್ಡ್ ಗಳನ್ನ ಕೇಂದ್ರ ಸರ್ಕಾರ ರದ್ದು ಮಾಡಿದೆ. ಗೊಂದಲಕ್ಕೆ ಅವಕಾಶ ಕೊಡಬಾರದು ಅಂತಾ ಈ ನಿರ್ಣಯ ತೆಗೆದುಕೊಂಡಿದ್ದೀವಿ. ಎಪಿಎಲ್ ನವ್ರು ಯಥಾಸ್ಥಿತಿಯಲ್ಲಿ ಇರ್ತಾರೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಬಿಪಿಎಲ್ ಕಾರ್ಡ್ದಾರರನ್ನು ಎಪಿಎಲ್ಗೆ ಸೇರ್ಪಡೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಇದರಲ್ಲಿ ಅಧಿಕಾರಿಗಳ ತಪ್ಪಿಲ್ಲ, ಎಲ್ಲ ಗೊಂದಲದ ಹೊಣೆ ನಾನೇ ಹೊರುವೆ. ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡುವೆ. ಯಾವುದೇ ಅರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸುವುದಿಲ್ಲ ಎಂದು ಭರವಸೆ ನೀಡಿದರು.