ಕಲಬುರಗಿ: ನಿಯಮ ಉಲ್ಲಂಘಿಸಿದ ಆರೋಪ ಹಿನ್ನಲೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾಲೀಕತ್ವದ ಸಿದ್ಧಶ್ರೀ ಸಕ್ಕರೆ ಕಾರ್ಖಾನೆ ಬಂದ್ ಮಾಡುವಂತೆ ಸರ್ಕಾರ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಕಲಬುರಗಿಯ ಚಿಂಚೋಳಿ ಬಳಿಯ ಸಕ್ಕರೆ ಕಾರ್ಖಾನೆ ಕಾಯಿದೆಗಳನ್ನ ಗಾಳಿಗೆ ತೂರಿದೆ.
ಹೀಗಾಗಿ ಫ್ಯಾಕ್ಟರಿ ಬಂದ್ ಮಾಡುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿದ್ರು..
ಇದೀಗ ಸರ್ಕಾರ ನಿರ್ಧಾರಕ್ಕೆ ಬ್ರೇಕ್ ಬಿದ್ದಿದ್ದು ಈ ವಿಚಾರ ಸತ್ಯಕ್ಕೆ ಸಿಕ್ಕ ಜಯ ಅಂತ ಟ್ವೀಟ್ ಮಾಡಿ ಯತ್ನಾಳ್ ಮಾಹಿತಿ ಹಂಚಿಕೊಂಡಿದ್ದಾರೆ..ಸಿಹಿ ಸುದ್ದಿ ಹೊರ ಬೀಳ್ತಿದ್ದಂತೆ ಕಾರ್ಮಿಕರು ಪಟಾಕಿ ಸಿಡಿಸಿ ಫ್ಯಾಕ್ಟರಿ ಮುಂಭಾಗ ಸಂಭ್ರಮಿಸಿದ್ದಾರೆ..