ರಾಯಚೂರು: ಶ್ರೀರಾಮನು ಕೇವಲ ಬಿಜೆಪಿಗೆ ಮಾತ್ರ ಸೀಮಿತವಲ್ಲ ದೇಶದ ಪ್ರತಿಯೊಬ್ಬರ ಜೊತೆಯೂ ಶ್ರೀರಾಮ ಇದ್ದಾನೆ. ರಾಮಮಂದಿರ ಪರಿಪೂರ್ಣಗೊಳ್ಳದೆ ಉದ್ಘಾಟನೆ ಮಾಡುತ್ತಿರುವುದರಿಂದ ಶಂಕರ ಮಠದ ಗುರುಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವಿಧಾನ ಪರಿಷತ್ತು ಸದಸ್ಯ ಎಚ್.ವಿಶ್ವನಾಥ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಶ್ರೀರಾಮ ಇಡೀ ಭಾರತೀಯರ ರಾಮನಾಗಿದ್ದು, ಬಿಜೆಪಿಗೆ ಮಾತ್ರ ಸೀಮಿತವಲ್ಲ. ಬಿಜೆಪಿ, ಕಾಂಗ್ರೆಸ್,ಜೆಡಿಎಸ್ ಜನರ ಧಾರ್ಮಿಕ ಭಾವನೆಗಳ ನಂಬಿಕೆಗೆ ಅರ್ಹವಾಗಿದೆ ಎಂದರು.
ಅಯೋಧ್ಯೆಯಲ್ಲಿ ಮೊಳಗಲಿದೆ ಕನ್ನಡದ ಹಾಡು!,, “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ” ಗೀತೆ
ರಾಜ್ಯದಲ್ಲಿ ಕಾಂತರಾಜ ವರದಿ ಜಾರಿಯಾಗಬೇಕು. ಆದರೆ ಇದಕ್ಕೆ ಮುಂದುವರೆದ ಜಾತಿಗಳು ಹಿಂದೇಟು ಹಾಕುತ್ತಿರುವುದರಿಂದ ನಾಡಿನ ಅಭಿವೃದ್ಧಿಗೆ ದಕ್ಕೆಯಾಗುತ್ತದೆ. ಕಾಂತರಾಜ್ ವರದಿಯ ಬಗ್ಗೆ ಬಿಜೆಪಿ ವಿರೋಧ ಪಕ್ಷ ನಾಯಕರಾದ ಆರ್.ಅಶೋಕ್ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜೇಯೇಂದ್ರ ಈ ಇಬ್ಬರಿಗೆ ಯಾವುದೇ ಮಾಹಿತಿ ಇಲ್ಲ. ಸುಮ್ಮನೆ ಏನೇನೋ ಮಾತನಾಡುತ್ತಿದ್ದಾರೆ.
ಈ ಜಾತಿಗಣತಿಯನ್ನು ಯಾರು ನೋಡಿದ್ದೀರಾ? ಈ ಹಿಂದೆ ಹಾವನೂರು ವರದಿ ಬಂದಾಗಲೂ ಇದೇ ರೀತಿ ವಿರೋಧವಾಗಿತ್ತು. ಆದರೆ ಅದು ಜಾರಿಯಾಯಿತು. ಅದರಿಂದ ಸಿಎಂ ಸಿದ್ದರಾಮಯ್ಯ ಅವರು ಕಾಂತರಾಜ್ ಸಮೀಕ್ಷೆ ಸ್ವೀಕರಿಸಿ ಜನರ ಬಳಿ ನೀಡಲಿ. ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಜಾರಿ ಮಾಡಲು ಸರಕಾರಕ್ಕೆ ಆಗ್ರಹಪಡಿಸುತ್ತೇನೆ’ ಎಂದರು.