ಹುಬ್ಬಳ್ಳಿ: ನಾರಾಯಣ ಪಾರಾಯಣ ಬಳಗದ ವತಿಯಿಂದ ವನಸಿರಿ ನಗರದ ಪ್ರೊ. ವಾಮನ ಬಾದ್ರಿ ಅವರ ನಿವಾಸದಲ್ಲಿ ಜ. 3 ಮತ್ತು 4ರಂದು ಸಂಜೆ 6ರಿಂದ 7 ಗಂಟೆಯವರೆಗೆ ಭಗವದ್ಗೀತೆಯ ಆರನೇ ಅಧ್ಯಾಯ ಪಾರಾಯಣ ಕಾರ್ಯಕ್ರಮ ಆಯೋಜಿಸಲಾಗಿದೆ.
ಪಂ. ಶ್ರೀನಿಧಿ ಆಚಾರ ಬಲ್ಲರವಾಡ ಪಾರಾಯಣ ನಡೆಸಿಕೊಡುವರು. ಜ. 4ರಂದು ಸಂಜೆ 6 ಗಂಟೆಗೆ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಭೀಮನಕಟ್ಟೆಯ ಶ್ರೀಮದ್ ಅಚ್ಯುತ ಪ್ರೇಕ್ಷಾಚಾರ್ಯ ಮಹಾಸಂಸ್ಥಾನದ ಶ್ರೀ ರಘುವರೇಂದ್ರ ತೀರ್ಥರು ಭಾಗವಹಿಸಿ ಅನುಗ್ರಹ ಸಂದೇಶ ನೀಡುವರು ಎಂದು ಬಳಗದ ಕಾರ್ಯದರ್ಶಿ ರಘೊತ್ತಮ ಅವಧಾನಿ ತಿಳಿಸಿದ್ದಾರೆ.