ಅಥಣಿ : ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾ ಸ್ವಾಮೀಜಿಯವರು ಅಥಣಿ, ತಾಲ್ಲೂಕು ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ 2024 ಪೂರ್ವಭಾವಿ ಸಭೆ ಹಾಗೂ ತಾಲ್ಲೂಕು ಮಟ್ಟದ ಜನಜಾಗೃತಿ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಜಾತ್ರೆ ಜಾಗೃತಿಗಾಗಿ, ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆಯ ಮೂಲಕ ಸಮುದಾಯವನ್ನು ಸದಾ ಜಾಗೃತಗೊಳಿಸಬೇಕು ಹಾಗೂ ಮಹಷಿ೯ ವಾಲ್ಮೀಕಿಯವರ ಮಾನವೀಯ ಮೌಲ್ಯಗಳನ್ನು, ಚಿಂತನೆಗಳನ್ನು ನಾಡಿನ ಜನತೆಗೆ ತಿಳಿಸುವುದರ ಜೊತೆಗೆ ಸಮುದಾಯವನ್ನು ಜಾತ್ರೆಯ ಮೂಲಕ ಜನ ಜಾಗೃತಿಗೊಳಿಸುವ ಜಾತ್ರೆ.
ಕೇಂದ್ರ ಸರ್ಕಾರದ ಗೆಜೆಟ್ ನೋಟಿಫಿಕೇಷನ್ ನಂತೆ ಕ್ರಮ ಸಂಖ್ಯೆ 38 ರಲ್ಲಿ ಬರುವ ನಾಯಕ ತಳವಾರ ನಾಯಕ ಪರಿವಾರ ಜಾತಿಗೆ ಪ.ಪಂ ಜಾತಿ ಪ್ರಮಾಣ ಪತ್ರ ನೀಡಬೇಕೆಂಬ ಸ್ಪಷ್ಟ ಉಲ್ಲೇಖವಿದ್ದರೂ, ನಾಯಕ ಜಾತಿಯಲ್ಲದ ಇತರೆ ಜಾತಿಗಳು ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಈ ಬಗ್ಗೆ ಸಮುದಾಯ ಜಾಗೃತವಾಗಬೇಕು, ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಹಂತದಲ್ಲಿ ಹೋರಾಟ ನಡೆಯುತ್ತದೆ. ನಿಮ್ಮ ನಿಮ್ಮ ಗ್ರಾಮ ಮಟ್ಟದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಈ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಬಗ್ಗೆ ಸೂಕ್ತ ದಾಖಲಾತಿಗಳನ್ನು ಶ್ರೀಮಠಕ್ಕೆ ತಲುಪಿಸಬೇಕು ಕಾನೂನು ಹೋರಾಟಕ್ಕೆ ಸಹಕರಿಸಬೇಕು ಎಂದರು
ಸರ್ಕಾರಕ್ಕೆ ಈಗಾಗಲೇ ನಕಲಿ ಜಾತಿ ಪ್ರಮಾಣ ಪತ್ರ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ನಾಯಕ ಜಾತಿಯಲ್ಲದ ಇತರೆ ಜಾತಿಗಳು ನಾಯಕ ತಳವಾರ, ಪರಿವಾರ, ಗೊಂಡ್ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ನಕಲಿ ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಿಗಳು ಹಾಗೂ ಪಡೆದುಕೊಂಡು ಸರ್ಕಾರಿ ಸೌಲಭ್ಯ ಹೊಂದಿ ನಾಯಕ ಜಾತಿಗೆ ಅನ್ಯಾಯವಾಗುತ್ತಿರುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳದಿದ್ದರೆ ಸಮುದಾಯವು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಇದು ಎಚ್ಚರಿಕೆ. ಎಂದು ತಿಳಿಸಿದರು
ಈ ಸಂದರ್ಭದಲ್ಲಿ, ತಾಲ್ಲೂಕು ಜಾತ್ರಾ ಸಮಿತಿ ಅಧ್ಯಕ್ಷರು ಹಾಗೂ ವಿ.ಎಸ್.ಎಸ್ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಥಣಿ, ತಾಲ್ಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಮಹಾಸಭಾ ವತಿಯಿಂದ ಶ್ರೀ ಪ್ರಸಾನಂದಪುರಿ ಜಗದ್ಗುರುಗಳನ್ನು ಸತ್ಕರಿಸಲಾಯಿತು
ರಮೇಶ ಸಿಂದಗಿ ಬಾಬು ಹುಲ್ಯಾಳ ಮುದಕ ಗಸ್ತಿ ಲಕ್ಕಪ್ಪ ನಾಯ್ಕ್ ಸಿದ್ದರಾಯ ನಾಯಕ ಚಂದ್ರಶೇಖರ್ ಸರ್ ಎಂ ಆರ್ ಈಶ್ವರಪ್ಪ ನಾಗಪ್ಪ ದಳವಾಯಿ ಮುಖಂಡರು, ಜಾತ್ರಾ ಸಮಿತಿ ಅಧ್ಯಕ್ಷರು, ವಿಎಸ್ಎಸ್ ಪದಾಧಿಕಾರಿಗಳು,ಹಾಗೂ ಯುವಕರು ಉಪಸ್ಥಿತರಿದ್ದರು.