ಅಡುಗೆಗೆ ಈರುಳ್ಳಿ ಹಾಕಿದ್ರೆ ಅಡುಗೆ ರುಚಿ ಹೆಚ್ಚುತ್ತೆ ಎನ್ನುವುದು ಗೊತ್ತೇ ಇದೆ. ಆದ್ರೆ ಈರುಳ್ಳಿ ಹೆಚ್ಚೋದು ಎಷ್ಟು ಕಷ್ಟ ಎನ್ನುವುದು ಅಡುಗೆ ಮಾಡುವವರಿಗೆ ಗೊತ್ತು. ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತದೆ. ಹಾಗಾಗಿ ಹೆಚ್ಚಿನವರು ಈರುಳ್ಳಿ ಕತ್ತರಿಸುವುದನ್ನು ಇಷ್ಟ ಪಡೋದಿಲ್ಲ. ನಾವಿಲ್ಲಿ ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರದಂತೆ ನೋಡಿಕೊಳ್ಳಲು ಕೆಲವೊಂದು ಟಿಪ್ಸ್ನ್ನು ತಿಳಿಸಿದ್ದೇವೆ.
ಈರುಳ್ಳಿಯನ್ನು ಕತ್ತರಿಸುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ:
ಈರುಳ್ಳಿಯನ್ನು ನೀರಿನಲ್ಲಿ ನೆನೆಸಿ:
ಈರುಳ್ಳಿ ಕತ್ತರಿಸುವ ಮೊದಲು ಅದನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. ಇದು ಸಲ್ಫರ್ ಅನಿಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಮತ್ತು ಇದರಿಂದ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದಿಲ್ಲ.
ಈರುಳ್ಳಿಯನ್ನು ಫ್ರೀಜರ್ ನಲ್ಲಿ ಇರಿಸಿ:
ಈರುಳ್ಳಿಯನ್ನು ಕತ್ತರಿಸುವ ಮೊದಲು ಅದನ್ನು ಸ್ವಲ್ಪ ಹೊತ್ತು ಫ್ರೀಜರ್ ನಲ್ಲಿ ಇರಿಸಿ. ಏಕೆಂದರೆ ಶೀತ ವಾವಾರಣಕ್ಕೆ ಸಲ್ಫರ್ ಗ್ಯಾಸ್ ಪ್ರಮಾಣ ಕಡಿಮೆಯಾಗುತ್ತದೆ. ಮತ್ತು ಇದರಿಂದ ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದಿಲ್ಲ.
ವಿನೆಗರ್ ಸಹಾಯವನ್ನು ತೆಗೆದುಕೊಳ್ಳಿ:
ಈರುಳ್ಳಿಯಿಂದ ಬಿಡುಗಡೆಯಾಗುವ ಕಿಣ್ವಗಳ ಪರಿಣಾಮವನ್ನು ಕಡಿಮೆ ಮಾಡಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಈರುಳ್ಳಿ ಕತ್ತರಿಸುವ ಮೊದಲು ಅದನ್ನು ವಿನೆಗರ್ ನಲ್ಲಿ ನೆನೆಸಿ ನಂತರ ಕತ್ತರಿಸಿ. ವಿನೆಗರ್ ಕೂಡಾ ಆಮ್ಲವನ್ನು ಹೊಂದಿರುತ್ತದೆ. ಇದು ಈರುಳ್ಳಿಯಲ್ಲಿರುವ ಕಿಣ್ವಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಕನಿಷ್ಟ 15 ರಿಂದ 20 ನಿಮಿಷಗಳ ಕಾಲ ಈರುಳ್ಳಿಯನ್ನು ವಿನೆಗರ್ ನಲ್ಲಿ ನೆನೆಸಿ. ಇದರಿಂದ ಕಣ್ಣಿನಲ್ಲಿ ಉರಿಯೂ ಕಾಣಿಸಿಕೊಳ್ಳುವುದಿಲ್ಲ.
ಚಾಕುವಿನ ಮೇಲೆ ನಿಂಬೆ ರಸವನ್ನು ಅನ್ವಯಿಸಿ:
ಈರುಳ್ಳಿಯನ್ನು ಕತ್ತರಿಸುವ ಮೊದಲು ನೀವು ಚಾಕುವಿನ ಮೇಲೆ ನಿಂಬೆ ರಸವನ್ನು ಅನ್ವಯಿಸಿದರೆ, ಅದು ಈರುಳ್ಳಿಯಿಂದ ಬಿಡುಗಡೆಯಾಗುವ ಕಿಣ್ವಗಳ ಪರಿಣಾಮವನ್ನು ಹೆಚ್ಚಿನ ಪ್ರಮಣದಲ್ಲಿ ತಟಸ್ಥಗೊಳಿಸುತ್ತದೆ. ಇದರಿಂದ ನಿಮ್ಮ ಕಣ್ಣುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಕಣ್ಣೀರು ಬರುವುದಿಲ್ಲ.
ಕನ್ನಡಕ ಧರಿಸಿ
ಈರುಳ್ಳಿ ಕತ್ತರಿಸುವಾಗ ನೀವು ಕನ್ನಡಕವನ್ನು ಬಳಸಬಹುದು. ಕಣ್ಣುಗಳಿಗೆ ಗಾಳಿಯನ್ನು ತಲುಪಲು ಅನುಮತಿಸದಂತಹ ಕನ್ನಡವನ್ನು ಬಳಸಬೇಕು. ಈ ರೀತಿಯಾಗಿ ನೀವು ಈರುಳ್ಳಿ ಕತ್ತರಿಸುವಾಗ ಈರುಳ್ಳಿಯಲ್ಲಿರುವ ಅನಿಲವು ನಿಮ್ಮ ಕಣ್ಣುಗಳನ್ನು ತಲುಪುವುದಿಲ್ಲ.
ಮೇಣದ ಬತ್ತಿಯನ್ನು ಹೊತ್ತಿಸಿ
ಈರುಳ್ಳಿಯನ್ನು ಕತ್ತರಿಸುವಾಗ ಹತ್ತಿರದಲ್ಲಿ ಮೇಣದಬತ್ತಿಯನ್ನು ಬೆಳಗಿಸಿದರೆ, ಅದರಿಂದ ಹೊರಬರುವ ಅನಿಲವು ಮೇಣದಬತ್ತಿಯೊಳಗೆ ಹೋಗುತ್ತದೆ ಮತ್ತು ನಿಮ್ಮ ಕಣ್ಣುಗಳು ಉರಿಯುವುದಿಲ್ಲ ಎನ್ನಲಾಗುತ್ತದೆ.