ಇಂದು ದೇಶದಲ್ಲಿ ಡೀಸೆಲ್ ಕಾರುಗಳ ಮೇಲೆ ಹೆಚ್ಚಿನ ಒಲವಿದೆ. ಭಾರತದಲ್ಲಿ ಸದ್ಯ ಡೀಸೆಲ್ ಬೆಲೆಯು ಪೆಟ್ರೋಲ್ಗೆ ಹೋಲಿಸಿಕೊಂಡರೆ ಅಗ್ಗವಾಗಿದೆ. ಅಂದರೆ, ಡೀಸೆಲ್ ಎಸ್ಯುವಿ ರನ್ನಿಂಗ್ ಕಾಸ್ಟ್ ಪೆಟ್ರೋಲ್ ಎಸ್ಯುವಿಗಿಂತ ಕಡಿಮೆಯಾಗಿರುತ್ತದೆ. ಹಾಗಾದರೆ ಭಾರತದಲ್ಲಿ ಪ್ರಸ್ತುತ ಅತಿ ಹೆಚ್ಚು ಮೈಲೇಜ್ ನೀಡುವ 4 ಡೀಸೆಲ್ ಎಸ್ಯುವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ.
*ಅತಿ ಹೆಚ್ಚು ಮೈಲೇಜ್ ನೀಡುವ ಡೀಸೆಲ್ ಎಸ್ಯುವಿಗಳಲ್ಲಿ ಕಿಯಾ ಸಾನೆಟ್ ಕೂಡ ಒಂದಾಗಿದೆ. ಈ SUV 1.5-ಲೀಟರ್ ಡೀಸೆಲ್ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತದೆ. ಇದು 115hp ಪವರ್ ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್, iMT ಆಯ್ಕೆಯನ್ನು ಹೊಂದಿದ್ದು, 24.1kmpl ಮೈಲೇಜ್ ನೀಡುತ್ತದೆ.
*ಟಾಟಾ ನೆಕ್ಸಾನ್ ಭಾರತದಲ್ಲಿ ಎರಡನೇ ಅತಿ ಹೆಚ್ಚು ಮೈಲೇಜ್ ಡೀಸೆಲ್ SUV ಆಗಿದೆ. ಈ SUV 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಇದು 115hp ಪವರ್ ಮತ್ತು 260Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ನೆಕ್ಸಾನ್ ಡೀಸೆಲ್ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಇದು ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ 24.07kpl ವರೆಗೆ ಮೈಲೇಜ್ ನೀಡುತ್ತದೆ.
* ಮಹೀಂದ್ರಾ XUV300: ಅತಿ ಹೆಚ್ಚು ಮೈಲೇಜ್ ನೀಡುವ ಡೀಸೆಲ್ SUVಗಳಲ್ಲಿ ಮಹೀಂದ್ರಾ XUV300 ಕೂಡ ಒಂದು. ಇದು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಇದು 117hp ಪವರ್ ಮತ್ತು 300Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. 20kmpl ಮೈಲೇಜ್ ನೀಡಬಲ್ಲದು.
* ಹುಂಡೈ ವೆನ್ಯೂ: ಹ್ಯುಂಡೈ ವೆನ್ಯೂ ಕೂಡ ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಡೀಸೆಲ್ SUV ಆಗಿದೆ. ಈ SUV 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ಗೆ ಮಾತ್ರ ಜೋಡಿಸಲಾಗಿದೆ. ಈ ಎಂಜಿನ್ 115 HP ಪವರ್ ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವೆನ್ಯೂ ಡೀಸೆಲ್ಗೆ ಸಂಬಂಧಿಸಿದಂತೆ, ಇದು 23.4kmpl ಮೈಲೇಜ್ ನೀಡುತ್ತದೆ.
ಸದ್ಯ ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೆಸ್ಟ್ ಡೀಸೆಲ್ ಎಸ್ಯುವಿಗಳಾಗಿ ಈ ಕಾರುಗಳು ಜನಪ್ರಿಯತೆ ಪಡೆದಿವೆ. ಇವುಗಳ ಬೆಲೆಗಳ ವಿಚಾರಕ್ಕೆ ಬಂದರೆ ವಿವಿಧ ಪ್ರದೇಶಗಳಲ್ಲಿ ವಿವಿಧ ಬೆಲೆಗಳನ್ನು ಹೊಂದಿರುವ ಕಾರಣ, ಕಂಪನಿಯ ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ ನಿಮ್ಮ ಸ್ಥಳಗಳನ್ನು ನಮೂದಿಸುವ ಮೂಲಕ ಬೆಲೆಗಳನ್ನು ತಿಳಿಯಬಹುದು.
ಭಾರತದಲ್ಲಿ ಎಸ್ಯುವಿ ಕ್ರೇಜ್ ನಿರಂತರವಾಗಿ ಬೆಳೆಯುತ್ತಿದೆ. ಡೀಸೆಲ್ ಎಂಜಿನ್ ಎಸ್ಯುವಿಗಳು ಸಾಮಾನ್ಯವಾಗಿ ಪೆಟ್ರೋಲ್ ಎಸ್ಯುವಿಗಳಿಗಿಂತ ಹೆಚ್ಚಿನ ಮೈಲೇಜ್ ನೀಡುತ್ತವೆ. ಹಾಗಾಗಿಯೇ ಇಂದು ದೇಶದಲ್ಲಿ ಡೀಸೆಲ್ ಕಾರುಗಳ ಮೇಲೆ ಹೆಚ್ಚಿನ ಒಲವಿದೆ.