ಬೆಂಗಳೂರು: ಪಕ್ಷದ ಲೀಡರ್ʼಗೆ ಸುಮ್ಮನೆ ಸಪೋರ್ಟ್ ಮಾಡೋದಲ್ಲ, ಅದನ್ನ ಖಂಡಿಸಬೇಕಲ್ವಾ..? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. . ನಗರದಲ್ಲಿ ಸಿ.ಟಿ ರವಿಅವರಿಗೆ ಕೋರ್ಟ್ ಜಾಮೀನು ನೀಡಿದ ವಿಚಾರವಾಗಿ ಮಾತನಾಡಿದ ಮಾತನಾಡಿದ ಅವರು, ಸಿ.ಟಿ ರವಿ ಮೇಲೆ ನನಗೂ ಸಿಂಪತಿ ಇತ್ತು.
ಚಿಕ್ಕಮಗಳೂರು ಜನ ಅಂದರೆ ಸಂಸ್ಕೃತಿಯುಳ್ಳ ಜನ. ಆದ್ರೆ ಆ ಪಾರ್ಟಿಯಲ್ಲಿ ಇರೋರು ಹೆಣ್ಣು ಮಕ್ಕಳ ಬಗ್ಗೆ ಸರಿಯಾಗಿ ಅಂತ ಅರ್ಥ ಮಾಡಿಕೊಳ್ಳಬೇಕು. ಆತ್ಮ ಸಾಕ್ಷಿ ಇದ್ರಲ್ಲಿ ಮುಖ್ಯ ಆಗುತ್ತೆ. ಪಕ್ಷದ ಲೀಡರ್ಗೆ ಸುಮ್ಮನೆ ಸಪೋರ್ಟ್ ಮಾಡೋದಲ್ಲ, ಅದನ್ನ ಖಂಡಿಸಬೇಕಲ್ವಾ..? ಸರಿ ಇಲ್ಲ ಅಂತ ಹೇಳಬೇಕಲ್ವಾ? ನನ್ನ ಪಕ್ಷದಲ್ಲಿ ಮಾತಾಡಿದ್ರೆ ಖಂಡಿಸ್ತಿದ್ದೆ ಎಂದು ನುಡಿದರು.
Long Pepper: ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತಾದ್ರೆ ಶಾಕ್ ಆಗೋದು ಗ್ಯಾರಂಟಿ.!?
ಕಾನೂನಿಗೆ, ಕೋರ್ಟ್ಗೆ ಏನು ಗೌರವ ಕೊಡಬೇಕೊ ಕೊಡುತ್ತೇವೆ. ಕೋರ್ಟ್ ಏನು ಬೇಕೋ ನಿರ್ಧಾರ ತೆಗೆದುಕೊಳ್ಳುತ್ತೆ. ಮೊದಲು ಅವರು ಮಾತನಾಡಿದ್ದು ಸರೀನಾ ಅಂತ ಕೇಳಿ? ಅವರ ಭಾಷೆ, ಸಂಸ್ಕ್ರತಿಯಿಂದ ಹರುಕು ಬಾಯಿ ಅನ್ನೋದು ಗೊತ್ತಾಗಿದೆ. ಈ ಹಿಂದೆ ಜಯಮಾಲಾಗೂ ಮಾತಾಡಿದ್ರು, ಸಿಎಂ ಬಗ್ಗೆನೂ ಮಾತನಾಡಿದ್ರು, ನಿತ್ಯ ಸುಮಂಗಲಿ ಅಂತ ಹೇಳಿದ್ರು, ಇದು ಸರಿನಾ, ತಪ್ಪಾ? ಎಂದು ಪ್ರಶ್ನಿಸಿದರು.