ಹೊಟ್ಟೆಯ ಬೊಜ್ಜು ದೇಹದ ಆಕಾರವನ್ನು ಹಾಳುಗೆಡುವುದಲ್ಲದೇ, ಅನೇಕಾನೇಕ ಆರೋಗ್ಯ ಸಮಸ್ಯೆಗಳನ್ನು ಸ್ವಾಗತಿಸುತ್ತದೆ. ಅದಕ್ಕಾಗಿ ಹೊಟ್ಟೆ ಭಾಗದಲ್ಲಿರುವ ಬೊಜ್ಜನ್ನು ಕರಗಿಸಲು ಹೆಚ್ಚಿನ ಆದ್ಯತೆ ನೀಡಬೇಕು.
ನರೇಂದ್ರ ಮೋದಿ ಭೇಟಿಯಾದ ಕಪೂರ್ ಕುಟುಂಬ: ಪ್ರಧಾನಿಗೆ ವಿಶೇಷ ಉಡುಗೊರೆ ನೀಡಿದ ಸ್ಟಾರ್ಸ್
ಹೊಟ್ಟೆಯಲ್ಲಿ ಬೊಜ್ಜು ಒಮ್ಮೆ ಹೆಚ್ಚಾದರೆ ಅದನ್ನು ಕರಗಿಸುವುದು ತುಂಬಾ ಕಷ್ಟ ಎಂದು ತಿಳಿದಿದ್ದರೂ ಸಹ ಅನೇಕ ಮಂದಿ ಈ ವಿಚಾರದ ಬಗ್ಗೆ ಅಸಡ್ಡೆ ತೋರುತ್ತಾರೆ. ಹೊಟ್ಟೆಯ ಬೊಜ್ಜಿನಿಂದ ಭವಿಷ್ಯದಲ್ಲಿ ಅನೇಕ ರೀತಿಯ ದೀರ್ಘಕಾಲದ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ವಿಶೇಷವಾಗಿ ಕೆಲವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಬಂದರೆ, ಮತ್ತೆ ಕೆಲವರಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು.
ಹೊಟ್ಟೆಯ ಬೊಜ್ಜಿನ ಸಮಸ್ಯೆ ಅನೇಕ ಮಂದಿಯಲ್ಲಿ ಸಾಮಾನ್ಯವಾಗಿದ್ದರೂ, ಕೆಲವು ಅಭ್ಯಾಸಗಳಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಜಂಕ್ ಫುಡ್ ಮತ್ತು ಸಂಸ್ಕರಿಸಿದ ಆಹಾರಗಳನ್ನು ಅತಿಯಾಗಿ ತಿನ್ನುವುದರಿಂದ ಅನೇಕರಲ್ಲಿ ಹೊಟ್ಟೆಯಲ್ಲಿ ಬೊಜ್ಜು ಬರುತ್ತದೆ. ಆದ್ದರಿಂದ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಇಂತಹ ಆಹಾರಗಳ ಸೇವನೆ ತಪ್ಪಿಸಿ.
ಇದಲ್ಲದೇ ಕೆಲವು ರೀತಿಯ ವ್ಯಾಯಾಮವನ್ನೂ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಆಯುರ್ವೇದ ಪ್ರಕಾರ, ಕೆಲ ಟಿಪ್ಸ್ ಫಾಲೋ ಮಾಡುವ ಮೂಲಕ ಸುಲಭವಾಗಿಯೇ ತೂಕ ಇಳಿಸಿಕೊಳ್ಳಬಹುದು. ಅದರಲ್ಲೂ ದಿನಕ್ಕೊಂದು ಬಾರಿ ಈ ಪಾನೀಯ ಕುಡಿಯುವುದರಿಂದ ಕೆಲವೇ ದಿನಗಳಲ್ಲಿ ಬೊಜ್ಜನ್ನು ಕರಗಿಸಿಕೊಳ್ಳಬಹುದು.
ಸಬ್ಜಾ ಸೀಡ್ ವಾಟರ್: ಪ್ರತಿದಿನ ಸಬ್ಜಾ ಸೀಡ್ ವಾಟರ್ ಕುಡಿಯುವುದರಿಂದ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರಲ್ಲಿರುವ ಗುಣಗಳು ಬೊಜ್ಜನ್ನು ಹೋಗಲಾಡಿಸಲು ತುಂಬಾ ಸಹಕಾರಿ ಆಗಿದೆ. ಅಲ್ಲದೇ ಸಬ್ಜಾ ಬೀಜ ನೆನೆಸಿದ ನೀರನ್ನು ಕುಡಿಯುವುದರಿಂದ ದೇಹವು ನಿರ್ಜಲೀಕರಣಗೊಳ್ಳುವುದನ್ನು ತಡೆಯುತ್ತದೆ.
ಪಾನೀಯವನ್ನು ತಯಾರಿಸಿ: ಮೊದಲು ಈ ಸಬ್ಜಾ ಬೀಜಗಳ ನೀರನ್ನು ತಯಾರಿಸಲು ನೀವು ಸ್ವಲ್ಪ ಸಬ್ಜಾ ಬೀಜಗಳನ್ನು ತೆಗೆದುಕೊಳ್ಳಬೇಕು. ಅದಾದ ನಂತರ ಖಾಲಿ ಲೋಟದಲ್ಲಿ ಸಬ್ಜಾ ಬೀಜಗಳನ್ನು ತೆಗೆದುಕೊಂಡು ಅದರಲ್ಲಿ ನೀರು ಸುರಿದು, ಒಂದು ಗಂಟೆಗಳ ಕಾಲ ನೆನೆಸಿಡಿ. ಇದಾದ ನಂತರ ಅಗತ್ಯವಿದ್ದರೆ ಕಪ್ಪು ಉಪ್ಪನ್ನು ಸೇರಿಸಿ ಅಥವಾ ನಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ. ಈ ಸಬ್ಜಾ ನೀರನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕುಡಿಯುವುದರಿಂದ ನಿಮಗೆ ಹಲವಾರು ಪ್ರಯೋಜನಗಳು ಸಿಗುತ್ತವೆ
ಸ್ಲಿಮ್ ಹೊಟ್ಟೆ: ಸಬ್ಜಾ ಬೀಜದ ನೀರು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಲು ಬಹಳ ಸಹಾಯಕವಾಗಿದೆ ಹೌದು. ಅಲ್ಲದೇ ಈ ನೀರಿಗೆ ಶುಂಠಿಯ ರಸವನ್ನು ಬೆರೆಸಿ ಕುಡಿಯುವುದರಿಂದ ನಿಮಗೆ ಅದ್ಭುತವಾದ ಆರೋಗ್ಯ ಪ್ರಯೋಜನಗಳು ಸಿಗುತ್ತದೆ.
ಸಬ್ಜಾ ಸೀಡ್ ವಾಟರ್: ಪ್ರತಿದಿನ ಸಬ್ಜಾ ಸೀಡ್ ವಾಟರ್ ಕುಡಿಯುವುದರಿಂದ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನುಇದೆಲ್ಲವನ್ನೂ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಕೊಬ್ಬನ್ನು ಹೋಗಲಾಡಿಸುವುದು ಮಾತ್ರವಲ್ಲದೇ ದೇಹದಲ್ಲಿನ ಕೊಬ್ಬಿನಂಶವೂ ಕಡಿಮೆಯಾಗುತ್ತದೆ. ಜೊತೆಗೆ ದೇಹದ ತೂಕವೂ ನಿಯಂತ್ರಣದಲ್ಲಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.