ಬೆಂಗಳೂರು: ತಮ್ಮ ವಾಸದ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಪಡೆದ ಆರೋಪ ಸಂಬಂಧ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ಡಿ ಕುಮಾರಸ್ವಾಮಿ, ಅಂತಹ ದೊಡ್ಡ ಅಪರಾಧ ನಡೆದಿಲ್ಲ, ನಾನೇನು ದೇಶ ಲೂಟಿ ಮಾಡಿಲ್ಲ. 2,000 ರೂಪಾಯಿಗೆ ಕರೆಂಟ್ ಕದೀಬೇಕಾ ನಾನು? ಎಂದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಬೇರೆ ಯಾವುದೇ ಕೆಲಸ ಇಲ್ಲ. ಕಾಂಗ್ರೆಸ್ಗೆ ದೊಡ್ಡ ದೊಡ್ಡ ಹಗರಣ ಬಯಲಿಗೆ ತರುವ ಧೈರ್ಯವಿಲ್ಲ. ಕಾಂಗ್ರೆಸ್ನವರು ರಾಜ್ಯವನ್ನು ಬೆಳಗಿಸಿರುವುದನ್ನು ನೋಡಿದ್ದೇನೆ. ದರಿದ್ರ ಬಂದಿರುವುದು ಕಾಂಗ್ರೆಸ್ ನಾಯಕರಿಗೆ ಎಂದರು.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ತಮ್ಮನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್ ಆರೋಪ ಮಾಡುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ಟಾರ್ಗೆಟ್ ಮಾಡಲಿ ಎಲ್ಲವನ್ನೂ ಅರಗಿಸಿಕೊಳ್ಳುವ ನೈತಿಕತೆ ಉಳಿಸಿಕೊಂಡಿದ್ದೇನೆ. ಯಾವುದನ್ನೂ ಮುಚ್ಚುಮರೆ ಮಾಡಲ್ಲ, ನಾನು ತೆರೆದ ಪುಸ್ತಕ ಇದ್ದಂತೆ. ಕಾಂಗ್ರೆಸ್ನವರ ದಬ್ಬಾಳಿಕೆ, ಆರೋಪಗಳನ್ನು ಅರಗಿಸಿಕೊಳ್ಳುವ ನೈತಿಕತೆ ಇದೆ. ಕಾಂಗ್ರೆಸ್ನವರ ಮಟ್ಟಕ್ಕೆ ಲೂಟಿ ಹೊಡೆಯುವ ಕೆಲಸಕ್ಕೆ ಕೈ ಹಾಕಿಲ್ಲ. ವಿಜಯಪುರದಲ್ಲಿ ಕೋ ಆಪರೇಟಿವ್ ಸೊಸೈಟಿಗೆ ನಕಲಿ ವಿಳಾಸ ನೀಡಿದ್ದಾರೆ. ಬೆಂಗಳೂರಿನ ಜಯನಗರ ಆಡ್ರೆಸ್ ಕೊಟ್ಟು ಲೈಸೆನ್ಸ್ ಪಡೆದಿದ್ದರು. ನಕಲಿ ಹೌಸಿಂಗ್ ಸೊಸೈಟಿ ಸೃಷ್ಟಿ ಮಾಡಿ ಲೂಟಿ ಮಾಡಿದ್ದು ನಾನಾ? ಕಾಂಗ್ರೆಸ್ನವರಿಗೆ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದರು.