ಪ್ರತಿಯೊಬ್ಬರೂ ತನ್ನ ಕೂದಲು ಯಾವಾಗಲೂ ಆರೋಗ್ಯಕರವಾಗಿರಬೇಕೆಂದು ಬಯಸುತ್ತಾರೆ. ಅದರಲ್ಲೂ ಮಹಿಳೆಯರಂತೂ ತಮ್ಮ ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುತ್ತಾರೆ. ಕೂದಲನ್ನು ಆರೋಗ್ಯಕರವಾಗಿಡಲು, ಅದನ್ನು ಕಾಳಜಿ ವಹಿಸುವುದು ಬಹಳ ಮುಖ್ಯ. ನಿಮ್ಮ ಕೂದಲಿನ ಬಗ್ಗೆ ನೀವು ಕಾಳಜಿ ವಹಿಸದಿದ್ದಲ್ಲಿ ಕೂದಲು ದುರ್ಬಲಗೊಳ್ಳುತ್ತದೆ ಮತ್ತು ಒಣಗುತ್ತದೆ ಇದರಿಂದಾಗಿ ಕೂದಲು ಒಡೆಯುವ ಸಮಸ್ಯೆಯೂ ಪ್ರಾರಂಭವಾಗುತ್ತದೆ.
Hubballi: ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಅಧಿಕಾರ ಸ್ವೀಕಾರ!
ಕೆಲವರು ಮಲಗುವ ಮೊದಲು ತಮ್ಮ ಕೂದಲನ್ನು ಜಡೆ ಹೆಣೆದು ಇಟ್ಟುಕೊಳ್ಳಲು ಇಷ್ಟಪಡುತ್ತಾರೆ, ಕೆಲವರು ತಮ್ಮ ಕೂದಲನ್ನು ಯಾವುದೇ ರೀತಿಯ ಕ್ಲಿಪ್ ಗಳನ್ನು ಬಳಸದೆಯೇ ಹಾಗೆಯೇ ಬಿಟ್ಟಿಡುತ್ತಾರೆ. ಆದರೆ ಈ ಎರಡು ವಿಧಾನಗಳಲ್ಲಿ ಯಾವುದು ನಿಮ್ಮ ಕೂದಲಿಗೆ ಉತ್ತಮ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಇವೆರಡರಲ್ಲಿ ಉತ್ತಮ ವಿಧಾನವನ್ನು ಆಯ್ಕೆ ಮಾಡಿಕೊಂಡು ಅದನ್ನು ಅನುಸರಿಸುವುದರಿಂದ ನಿಮ್ಮ ಕೂದಲು ಒಡೆಯುವುದನ್ನು ತಡೆಯಬಹುದು. ಮಾತ್ರವಲ್ಲ ಇದು ನಿಮ್ಮ ಕೂದಲನ್ನು ಬಲವಾಗಿ ಮತ್ತು ಹೊಳೆಯುವಂತೆ ಇರಲು ನೋಡಿಕೊಳ್ಳುತ್ತದೆ. ಹಾಗಾದರೆ ಮಲಗುವಾಗ ಕೂದಳಿಗೆ ಜಡೆ ಹಾಕಬೇಕೇ ಅಥವಾ ಹಾಗೆಯೇ ಬಿಟ್ಟರೆ ಒಳ್ಳೆಯದೇ? ಕೂದಲನ್ನು ಆರೋಗ್ಯಕರವಾಗಿ ಮತ್ತು ಸುಂದರವಾಗಿಡಲು ಯಾವ ವಿಧಾನ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಕೂದಲು ತುಂಬಾ ಉದ್ದವಿದ್ದರೆ ಸಡಿಲವಾಗಿ ಜಡೆ ಹಾಕಿಕೊಂಡು ಮಲಗುವುದು ಬಹಳ ಉತ್ತಮ. ಇದು ಕೂದಲನ್ನು ಒಡೆಯದಂತೆ ರಕ್ಷಿಸುತ್ತದೆ. ಆದರೆ ಜಡೆಯನ್ನು ತುಂಬಾ ಬಿಗಿಯಾಗಿ ಹಾಕಿಕೊಳ್ಳಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇಲ್ಲದಿದ್ದರೆ ಇದು ನೆತ್ತಿಗೆ ಒತ್ತಡ ಹೇರಬಹುದು. ಈ ಸಡಿಲವಾದ ಜಡೆ ಕೂದಲಿನ ಬೇರುಗಳನ್ನು ರಕ್ಷಿಸುತ್ತದೆ. ಅವುಗಳ ನೈಸರ್ಗಿಕ ಬೆಳವಣಿಗೆಯ ಪ್ರಕ್ರಿಯೆಯೂ ಉತ್ತಮವಾಗಿರುತ್ತದೆ. ಇದರಿಂದಾಗಿ ಕೂದಲು ಬೇಗ ಉದ್ದ ಬೆಳೆಯುತ್ತದೆ. ಜಡೆ ಹಾಕಿ ಮಲಗುವುದು ತಲೆಯ ಕೂದಲನ್ನು ವ್ಯವಸ್ಥಿತವಾಗಿರಿಸುತ್ತದೆ, ರಾತ್ರಿ ಸಮಯದಲ್ಲಿ ಬೆವರುವ ಸಮಸ್ಯೆಯನ್ನು ಕೂಡ ಕಡಿಮೆ ಮಾಡುತ್ತದೆ. ಈ ವಿಧಾನವು ಬೇಸಿಗೆಯಲ್ಲಿ ವಿಶೇಷವಾಗಿ ಆರಾಮದಾಯಕವಾಗಿದೆ.
ನಿಮ್ಮ ಕೂದಲು ಚಿಕ್ಕದಾಗಿದ್ದರೆ ಅಥವಾ ನಿಮ್ಮ ಕೂದಲನ್ನು ಹಾಗೆಯೇ ಬಿಟ್ಟುಕೊಂಡು ಮಲಗಲು ನಿಮಗೆ ಆರಾಮದಾಯಕವಾಗಿದ್ದರೆ, ನಿಮ್ಮ ಕೂದಲನ್ನು ಹಣೆಯಬೇಕು ಎಂಬುದಿಲ್ಲ. ಆದರೆ ಕೂದಲು ಜಟಿಲವಾಗುವುದನ್ನು ಮತ್ತು ಒಡೆಯುವುದನ್ನು ತಡೆಯಲು ರೇಷ್ಮೆ ಅಥವಾ ಸ್ಯಾಟಿನ್ ದಿಂಬುಗಳನ್ನು ಬಳಸಿ. ಇದು ಕೂದಲಿನ ತೇವಾಂಶವನ್ನು ಕಾಪಾಡಿಕೊಳ್ಳುತ್ತದೆ.
ಬಿಗಿಯಾದ ಜಡೆ ಅಥವಾ ಪೋನಿಟೆಲ್ನೊಂದಿಗೆ ಮಲಗುವುದು ಕೂದಲಿನ ಬೇರುಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಕೂದಲನ್ನು ಕಟ್ಟದೆಯೇ ಹಾಗೆಯೇ ಬಿಟ್ಟುಕೊಂಡು ಮಲಗುವುದು ನೆತ್ತಿ ಮತ್ತು ಕೂದಲಿನ ಬೇರುಗಳಿಗೆ ಪರಿಹಾರವನ್ನು ನೀಡುತ್ತದೆ, ಇದು ಅವುಗಳ ನೈಸರ್ಗಿಕ ಬೆಳವಣಿಗೆಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಇದಲ್ಲದೆ, ಈ ವಿಧಾನ ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಕೂದಲಿನ ಬೇರುಗಳನ್ನು ಪೋಷಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ.
ಮಲಗುವ ಮೊದಲು ನಿಮ್ಮ ಕೂದಲನ್ನು ಲಘುವಾಗಿ ಬಾಚಿಕೊಳ್ಳಿ. ಇದರಿಂದ ಅದು ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳುವುದಿಲ್ಲ. ಕೂದಲು ಒದ್ದೆಯಾಗಿದ್ದರೆ, ಮೊದಲು ಅವುಗಳನ್ನು ಒಣಗಿಸಿ. ಒದ್ದೆಯಾದ ಕೂದಲು ದುರ್ಬಲವಾಗಿರುತ್ತದೆ ಮತ್ತು ಒಡೆಯಬಹುದು.