ನವದೆಹಲಿ: ಇಂದು ಬೆಳಗ್ಗೆ ಪ್ರಮುಖ ನಗರಗಳಿಂದ ಹೊರಡಬೇಕಿದ್ದ ಕನಿಷ್ಠ 38 ವಿಸ್ತಾರಾ ವಿಮಾನಗಳ ಹಾರಾಟ ರದ್ದಾಗಿದೆ. ಹೌದು ಮುಂಬೈನಿಂದ 15 ವಿಮಾನಗಳು, ದೆಹಲಿಯಿಂದ 12 ಮತ್ತು ಬೆಂಗಳೂರಿನಿಂದ ಹೊರಡಬೇಕಿದ್ದ 11 ವಿಮಾನಗಳು ಹಾರಾಟ ನಡೆಸಿಲ್ಲ. 50ಕ್ಕೂ ಹೆಚ್ಚು ವಿಸ್ತಾರಾ ವಿಮಾನಗಳು ರದ್ದುಗೊಂಡಿದ್ದಲ್ಲದೆ, ಸುಮಾರು 160 ವಿಮಾನಗಳು ತಡವಾಗಿ ಹಾರಾಟ ನಡೆಸಿದ್ದವು. ಇದೀಗ ಮಂಗಳವಾರವೂ ಇದೇ ಬೆಳವಣಿಗೆ ಪುನರಾವರ್ತನೆಯಾಗಿದೆ.
ವಿಮಾನ ರದ್ದುಗೊಂಡಿದ್ದರ ಬಗ್ಗೆ ಹಾಗೂ ವಿಳಂಬವಾಗಿರುವ ಬಗ್ಗೆ ತಮಗೆ ಸರಿಯಾದ ಮಾಹಿತಿ ನೀಡಿಲ್ಲ. ವಿಮಾನ ನಿಲ್ದಾಣದಲ್ಲಿ ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಪ್ರಯಾಣಿಕರು ದೂರಿದ್ದು, ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿ ಅಲಭ್ಯತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕಳೆದ ಕೆಲವು ದಿನಗಳಲ್ಲಿ ಗಮನಾರ್ಹ ಸಂಖ್ಯೆಯ ವಿಮಾನಗಳ ಪ್ರಯಾಣ ರದ್ದು ಹಾಗೂ ವಿಳಂಬವಾಗಿವೆ ಎಂದು ವಿಸ್ತಾರಾ ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ರೆಡಿಟ್ ಕಾರ್ಡ್ʼದಾರರಿಗೆ ಬಿಗ್ ಅಪ್ಡೇಟ್..! ಏಪ್ರಿಲ್ 1 ರಿಂದ ನಿಯಮದಲ್ಲಿ ಬದಲಾವಣೆ
“ನಮ್ಮ ಗ್ರಾಹಕರಿಗೆ ಉಂಟಾದ ಅನಾನುಕೂಲತೆಯನ್ನು ನಾವು ಒಪ್ಪಿಕೊಳ್ಳುತ್ತೇವೆ ಹಾಗೂ ಇದಕ್ಕಾಗಿ ತೀವ್ರ ಕಳವಳ ವ್ಯಕ್ತಪಡಿಸುತ್ತೇವೆ. ನಮ್ಮ ತಂಡಗಳು ಗ್ರಾಹಕರಿಗೆ ಉಂಟಾಗುತ್ತಿರುವ ಅನಾನುಕೂಲತೆಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿವೆ,” ಎಂದು ಮಾಹಿತಿ ನೀಡಿದೆ. ನಮ್ಮ ನೆಟ್ವರ್ಕ್ನಾದ್ಯಂತ ಸಾಕಷ್ಟು ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ತಾನು ನಿರ್ವಹಿಸುವ ವಿಮಾನಗಳ ಸಂಖ್ಯೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ನಿರ್ಧರಿಸಿರುವುದಾಗಿಯೂ ವಿಮಾನಯಾನ ಸಂಸ್ಥೆ ಹೇಳಿದೆ.
ಅಲ್ಲದೆ ಬಿ787-9 ಡ್ರೀಮ್ಲೈನರ್ ಮತ್ತು ಎ321 ನಿಯೋದಂತಹ ದೊಡ್ಡ ವಿಮಾನಗಳನ್ನು ಆಯ್ದ ದೇಶೀಯ ಮಾರ್ಗಗಳಲ್ಲಿ ನಿಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ನಿರ್ವಹಿಸಲು ಉದ್ದೇಶಿಸಲಾಗಿದೆ. ಇದಲ್ಲದೆ, ನಾವು ಪರ್ಯಾಯ ವಿಮಾನಗಳ ಆಯ್ಕೆಯನ್ನು ಅಥವಾ ಸಮಸ್ಯೆಗೆ ಗುರಿಯಾದ ಗ್ರಾಹಕರಿಗೆ ಮರುಪಾವತಿಯನ್ನು ನೀಡುತ್ತೇವೆ ಎಂದೂ ವಿಸ್ತಾರಾ ತಿಳಿಸಿದೆ.