ಕಲಬುರ್ಗಿ:- ಸಾಲಸೂಲ ಮಾಡಿ ಬೆಳೆದಿದ್ದ ಮೂರುವರೆ ಎಕರೆ ಕಬ್ಬು ಸುಟ್ಟು ಕರಕಲಾದ ಘಟನೆ ಕಲಬುರಗಿಯ ಕಡಣಿ ಗ್ರಾಮದಲ್ಲಿ ನಡೆದಿದೆ.
ರೈತ ಹಣಮಂತರಾಯಗೆ ಸೇರಿದ ಹೊಲದಲ್ಲಿ ಶಾಟ್ ಸರ್ಕ್ಯೂಟ್ ಆಗಿ ಬೆಳೆದು ನಿಂತಿದ್ದ ಇಡೀ ಕಬ್ಬು ಹೊತ್ತಿ ಉರಿದಿದೆ.
ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸಿದೆ..ಆದ್ರೆ 2 ಲಕ್ಷಕ್ಕೂ ಅಧಿಕ ಮೌಲ್ಯದ ಕಬ್ಬು ಹಾನಿಯಾಗಿದ್ದು ಸರ್ಕಾರ ನೆರವಿಗೆ ಬರಬೇಕು ಅನ್ನೋದು ಅನ್ನದಾತನ ಅಳಲು.