ಮೈಸೂರು: ಬೈಕ್ ಶೋ ರೂಂನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅಗ್ನಿ ಅವಘಡವಾಗಿರುವ ಘಟನೆ ನಗರದ ಎಚ್.ಡಿ ಕೋಟೆ ಪಟ್ಟಣದಲ್ಲಿ ನಡೆದಿದೆ.
ಜೆಕೆ ಮೋಟಾರು ಬೈಕ್ ಶೋ ರೂಂ ಆಗಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಕೂಡ ಆಗಿದೆ ಹಾಗೆ ಬೆಳಗಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ ಅವಘಡ. ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮನವಾಗಿದ್ದು ಬೆಂಕಿ ನಂದಿಸುವ ಕಾರ್ಯ ನಡೆದಿದೆ.
ಆಗಸದತ್ತ ಚಿಮ್ಮಿದ ಅಪಾರ ಪ್ರಮಾಣದ ಹೊಗೆ ಮಿಶ್ರಿತ ಬೆಂಕಿಯ ಕೆನ್ನಾಲಿಗೆ ಭಯಭೀತರಾದ ಷೋರೂಂ ಆಸುಪಾಸಿನಲ್ಲಿ ವಾಸವಾಗಿರುವ ಜನ. ಬೆಂಕಿಗಾಹುತಿಯಾದ ಷೋರೂಂನಲ್ಲಿದ್ದ ಹಲವು ಮೋಟಾರ್ ಬೈಕ್ ಗಳು, ವಿದ್ಯುತ್ ಪ್ರವಾಹ ಕಡಿತಗೊಳಿಸಿ ಕಾರ್ಯಾಚರಣೆಗೆ ಮುಂದಾದ ಅಗ್ನಿ ಶಾಮಕ ಸಿಬ್ಬಂದಿಘಟನೆ ಸ್ಥಳದಲ್ಲಿ ಜಮಾಯಿಸಿದ್ದ ಅಪಾರ ಪ್ರಮಾಣದ ಜನ