ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿಯಲು ಮುಹೂರ್ತ ಫಿಕ್ಸ್ ಆಗಿದೆ. ಹತ್ತು ತಿಂಗಳ ಬಳಿಕ ದಾಸ ಬಣ್ಣ ಹಚ್ಚಿ ಮತ್ತೆ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ದರ್ಶನ್ ಜಮೀನು ಪಡೆದು ಹೊರಬಂದಿದ್ದು, ನಾಳೆಯಿಂದ ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಎಲ್ಲಿ ಶೂಟಿಂಗ್ ನಿಂತಿತ್ತೋ ಅಲ್ಲಿಂದಲೇ ಚಿತ್ರೀಕರಣ ಪುನಾರಂಭವಾಗುತ್ತಿದೆ. ಮೈಸೂರಿನಲ್ಲಿ ಡೆವಿಲ್ ಸಿನಿಮಾದ ಶೂಟಿಂಗ್ ಗೆ ಅನುಮತಿ ಸಿಕ್ಕಿದೆ. ಈ ಹಿಂದೆ ಡೆವಿಲ್ ಶೂಟಿಂಗ್ ಮುಗಿಸಿ ಮೈಸೂರಿನ ರ್ಯಾಡಿಸನ್ ಬ್ಲ್ಯೂ ಹೋಟೆಲ್ ನಲ್ಲಿ ಜಿಮ್ ಮಾಡುತ್ತಿದ್ದಾಗಲೇ ದಾಸನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಜೈಲಿಂದ ಹೊರಬಂದ ದಚ್ಚು ಚಿತ್ರೀಕರಣದಲ್ಲಿ ಮತ್ತೆ ತೊಡಗಿಸಿಕೊಳ್ಳುತ್ತಿದ್ದಾರೆ.
ಮೈಸೂರಿನಲ್ಲಿ ನಾಳೆಯಿಂದ ಇದೇ 15ರವರೆಗೆ ಶೂಟಿಂಗ್ಗೆ ನಡೆಯಲಿದೆ. ಇದರ ಜೊತೆಗೆ ಹತ್ತು ಜನ ಪೊಲೀಸರು ಒಂದು ಪಾಳಿಯಂತೆ ಅವರು ಶೂಟಿಂಗ್ ಮಾಡುವ ಸಂದರ್ಭದಲ್ಲಿ ಭದ್ರತೆ ಕೊಡಲು ಕೂಡ ಅವಕಾಶ ಸಿಕ್ಕಿದೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಶೂಟಿಂಗ್ ಮುಗಿಯುವವರೆಗೂ ಭಾರೀ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಇದೇ ಸಂದರ್ಭದಲ್ಲಿ ಭದ್ರತೆಗಾಗಿ 16,4,785 ರೂಪಾಯಿ ಹಣವನ್ನು ಕಟ್ಟಿಸಿಕೊಂಡಿದ್ದಾರೆ. ಬೆಳಗ್ಗೆ ಏಳು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ಚಿತ್ರೀಕರಣ ನಡೆಯಲಿದೆ.
ಮಿಲನ ಪ್ರಕಾಶ್ ಡೆವಿಲ್ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡ್ತಿದ್ದಾರೆ. ಶ್ರೀ ಜೈಮಠ ಕಂಬೈನ್ಸ್ ಮತ್ತು ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಯುವ ನಟಿ ರಚನಾ ರೈ ದರ್ಶನ್ ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.