ದೆಹಲಿ: ಗೂಗಲ್ (Google) ಕಂಪನಿ ತನ್ನ ಸುರಕ್ಷತಾ ನಿಯಮಗಳನ್ನು ಅಪ್ಡೇಟ್ ಮಾಡಿದ್ದು, ಜಿ-ಮೇಲ್ ಖಾತೆ ಹೊಂದಿದ್ದು, ಸಕ್ರಿಯರಾಗಿಲ್ಲದವರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದೆ.
2 ವರ್ಷ ಬಳಸದೇ ಇರುವ ಜಿ-ಮೇಲ್ ಖಾತೆಗಳನ್ನು (Gmail Accounts) ಡಿಸೆಂಬರ್ನಲ್ಲಿ ಬಂದ್ ಮಾಡಲಾಗುವುದು ಎಂದು ತಿಳಿಸಿದೆ. ಹೀಗಾಗಿ ಒಮ್ಮೆ ಲಾಗಿನ್ ಆಗಿ ಖಾತೆ ಉಳಿಸಿಕೊಳ್ಳಿ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ.
ಗೂಗಲ್ ಕಂಪನಿಯು ಸುರಕ್ಷತಾ ನಿಯಮಗಳನ್ನು ಕಳೆದ ಮೇ ತಿಂಗಳಲ್ಲಿ ಅಪ್ಡೇಟ್ ಮಾಡಿತ್ತು. ಆಗಲೇ ಅದರ ಉಪಾಧ್ಯಕ್ಷೆ ರೂತ್ ಕ್ರಿಚೇಲ್, ಮುಂಬರುವ ಡಿಸೆಂಬರ್ನಲ್ಲಿ ಕಳೆದ 2 ವರ್ಷಗಳಿಂದ ಒಮ್ಮೆಯೂ ಲಾಗಿನ್ ಮಾಡದ ಅಥವಾ ಬಳಕೆ ಮಾಡದ ವೈಯಕ್ತಿಕ ಗೂಗಲ್ ಖಾತೆಗಳನ್ನು ಡಿಲೀಟ್ ಮಾಡಲು ಆರಂಭಿಸುತ್ತೇವೆ ಎಂದು ತಿಳಿಸಿದ್ದರು. ಮುಂದಿನ ಎರಡು ವರ್ಷಗಳಲ್ಲಿ ಕನಿಷ್ಠ ಬಳಕೆ ಮಾಡದ ಖಾತೆಗಳನ್ನು ನಿರಂತರವಾಗಿ ರದ್ದುಪಡಿಸುತ್ತೇವೆ ಎಂದು ಸೂಚನೆ ನೀಡಿದ್ದಾರೆ.ಮರೆತ, ಬಳಸದ ಖಾತೆಗಳು ಗೂಗಲ್ ಅಥವಾ ಖಾತೆದಾರರಿಗೆ ಅಪಾಯ ತರಬಹುದು ಎಂಬ ಕಾರಣಕ್ಕೆ ಡಿಲೀಟ್ ಮಾಡಲು ಗೂಗಲ್ ಮುಂದಾಗಿದೆ. ಜಿ-ಮೇಲ್ ಅಕೌಂಟ್ಗಳು ಡಿಲೀಟ್ ಆಗಬಾರದು ಎನ್ನುವವರು ಕಳೆದ 2 ವರ್ಷಗಳಿಂದ ಖಾತೆ ಬಳಸದಿದ್ದರೆ ಲಾಗಿನ್ ಆಗಬೇಕಿದೆ.