ಬೆಂಗಳೂರು:- ಶೀಘ್ರದಲ್ಲೇ ಕಾಫಿ ಜೊತೆಗೆ ಟೀ ಬೆಲೆ ಹೆಚ್ಚಾಗುವ ಸಾಧ್ಯತೆ ಇದ್ದು, ನಿತ್ಯ ಇಷ್ಟ ಪಟ್ಟು ಕುಡಿಯುವವರಿಗೆ ಇದು ಕೊಂಚ ಬೇಸರ ತರಿಸಿದೆ.
ಇನ್ಮುಂದೆ ಸೆಕೆಂಡ್ಸ್ ನಲ್ಲಿ ವಿಮಾನವನ್ನು ಖರೀದಿ ಮಾಡ್ಬಹುದು! ಅರೆ ಇದು ನಿಜಾ ಸ್ವಾಮಿ! ಈ ಸ್ಟೋರಿ ನೋಡಿ!
ಕಾಫಿ ಮತ್ತು ಟೀ ಹೆಸರು ಕೇಳಿದ್ರೇನೆ ಕೆಲವರ ಮೂಡ್ ಸರಿ ಹೋಗಿ ಬಿಡುತ್ತೆ. ಕಾಫಿ ಪರಿಮಳಕ್ಕೆ ಮೈಂಡ್ ಆಕ್ಟಿವ್ ಆಗಿ ಬಿಡುತ್ತೆ. ಐಟಿ ಸಿಟಿ ಬೆಂಗಳೂರಿನಲ್ಲಿ ಕಾಫಿ ಪ್ರಿಯರು ಸಿಕ್ಕಾಪಟ್ಟೆ ಇದ್ದಾರೆ. ಅಂತವರಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಸದ್ಯದಲ್ಲೇ ಕಾಫಿ ಬೆಲೆ ಏರಿಕೆ ಆಗಲಿದೆ. ಕಾಫಿ ಪುಡಿ ಬೆಲೆ ಹೆಚ್ಚಳದ ಬೆನ್ನಲ್ಲೇ ಕಾಫಿ ಬೆಲೆ ಹೆಚ್ಚಿಸುವ ಪ್ಲ್ಯಾನ್ನಲ್ಲಿ ಹೋಟೆಲ್ ಮಾಲೀಕರಿದ್ದಾರೆ.
ಬೆಲೆ ಏರಿಕೆ ಬಿಸಿ ಮಧ್ಯೆ ಕಾಫಿ ಪ್ರಿಯರಿಗೆ ಶಾಕ್ ಎದುರಾಗಿದೆ. ವರ್ಷದಿಂದ ವರ್ಷಕ್ಕೆ ಕಾಫಿ ಪುಡಿ ಬೆಲೆ ಹೆಚ್ಚಳವಾಗುತ್ತಿರುವ ಕಾರಣ ಅನಿವಾರ್ಯವಾಗಿ ಕಾಫಿ ದರ ಹೆಚ್ಚಿಸಬೇಕಾಗಿದೆ ಎನ್ನುವುದು ಹೋಟೆಲಿಗರ ವಾದವಾಗಿದೆ. ಸದ್ಯ 3.5 ಲಕ್ಷ ಟನ್ ಕಾಫಿ ಪುಡಿ ತಯಾರಿಕೆ ಆಗುತ್ತದೆ. 1 ಲಕ್ಷ ಟನ್ ಕಾಫಿ ಪುಡಿ ಹೋಟೆಲ್ ಡೊಮೆಸ್ಟಿಕ್ ಬಳಕೆಗೆ ಖರ್ಚಾಗುತ್ತದೆ.
ರೋಬೊಸ್ಟ ಹಾಗೂ ಅರೆಬಿಕಾ ಕಾಫಿ ಪುಡಿ ಎರಡು ವಿಧದ ಕಾಫಿ ಪುಡಿಗಳಿದ್ದು ಕಳೆದ ಜನವರಿಯಿಂದ ಇಲ್ಲಿಯವರೆಗೆ ಸರಾಸರಿ 3 ಸಲ ದರ ಹೆಚ್ಚಳವಾಗಿದೆ. ಜನವರಿಯಲ್ಲಿ ಕೆಜಿ ಕಾಫಿ ಪುಡಿಗೆ ಇದ್ದ 200 ರೂಪಾಯಿ ಇತ್ತು. ಇದೀಗ 420 ರೂ. ಏರಿಕೆ ಆಗಿದೆ. ಅಕ್ಟೋಬರ್ 16 ರಿಂದ ಕೆಜಿ ಕಾಫಿ ಪುಡಿ 100 ರೂ ಹೆಚ್ಚಾಗುತ್ತಿದೆ. ಹೀಗಾಗಿ ಕಾಫಿ ಬೆಲೆಯನ್ನು ಹೆಚ್ಚಿಸಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.
ಇನ್ನು ಕಾಫಿ ಹಾಗೂ ಟೀ ಪೌಡರ್ ಬೆಲೆ ಏರಿಕೆ ಗ್ರಾಹಕರಿಗೂ ಸಂಕಷ್ಟ ತಂದಿದೆ. ಬೆಲೆ ಏರಿಕೆಯಾದ್ರೆ ದಿನಕ್ಕೆ ಏನಿಲ್ಲ ಅಂದ್ರೂ ಆರೇಳು ಬಾರಿ ಕಾಫಿ ಕುಡಿಯೋರು ಹಿಂದೆ ಮುಂದೆ ನೋಡಬೇಕು ಅಂತಿದ್ದಾರೆ