ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಡಿಲೇಡ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೆಡ್ ಶತಕದ ನೆರವಿನಿಂದ ಆಸೀಸ್ ಮೊದಲ ಇನ್ನಿಂಗ್ಸ್ನಲ್ಲಿ 337 ರನ್ ಕಲೆಹಾಕಿದೆ. ಬಳಿಕ ತನ್ನ ಸರದಿಯ 2ನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 24 ಓವರ್ಗಳಲ್ಲಿ 128 ರನ್ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿದ್ದು, 29 ರನ್ಗಳ ಹಿನ್ನಡೆ ಅನುಭವಿಸಿದೆ.
ಭಾರತ 128ಕ್ಕೆ 5 ವಿಕೆಟ್:
ತನ್ನ ಸರದಿಯ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ವೇಗಿಗಳ ದಾಳಿಗೆ ತತ್ತರಿಸಿತು. ಅಗ್ರ ಕ್ರಮಾಂಕದ ಬ್ಯಾಟರ್ಗಳು ಮತ್ತೆ ವೈಫಲ್ಯ ಅನುಭವಿಸಿದ್ರು. ಯಶಸ್ವಿ ಜೈಸ್ವಾಲ್ 24 ರನ್, ಶುಭಮನ್ ಗಿಲ್ 28 ರನ್, ರೋಹಿತ್ ಶರ್ಮಾ 6 ರನ್, ವಿರಾಟ್ ಕೊಹ್ಲಿ 11 ರನ್ ಗಳಿಸಿ ಪೆವಿಲಿಯನ್ಗೆ ಮರಳಿದ್ರು. ಇನ್ನೂ ರಿಷಭ್ ಪಂತ್ 28 ರನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ 15 ರನ್ ಗಳಿಸಿ ಕ್ರೀಸ್ನಲ್ಲಿ ಉಳಿದರು. ಟೀಂ ಇಂಡಿಯಾ ವಿರುದ್ಧ ಬಿಗಿ ಹಿಡಿತ ಸಾಧಿಸಿದ ಆಸೀಸ್ ವೇಗಿಗಳಾದ ಸ್ಕಾಟ್ ಬೋಲೆಂಡ್, ಪ್ಯಾಟ್ ಕಮ್ಮಿನ್ಸ್ ತಲಾ 2 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್ ಒಂದು ವಿಕೆಟ್ ಪಡೆದರು.
ಯಾವುದೇ ಡಯಟ್, ವ್ಯಾಯಮ ಮಾಡದೇ ಸ್ಲಿಮ್ ಆಗಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು
ಇನ್ನೂ ಮೊದಲ ದಿನದ ಅಂತ್ಯಕ್ಕೆ 33 ಓವರ್ಗಳಲ್ಲಿ 86 ರನ್ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದ ಆಸೀಸ್ ಇಂದು 2ನೇ ದಿನದ ಇನ್ನಿಂಗ್ಸ್ ಆರಂಭಿಸಿತು. 103 ರನ್ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಆಸೀಸ್ಗೆ ಮಧ್ಯಮ ಕ್ರಮಾಂಕದ ಆಟಗಾರರು ಜೀವ ತುಂಬಿದರು. ಮಾರ್ನಸ್ ಲಾಬುಶೇನ್ – ಟ್ರಾವಿಸ್ ಹೆಡ್ ಅವರ 65 ರನ್ ಜೊತೆಯಾಟ, ಮಿಚೆಲ್ ಮಾರ್ಶ್ -ಹೆಡ್ 40 ರನ್ಗಳ ಜೊತೆಯಾಟ ಹಾಗೂ ಅಲೆಕ್ಸ್ ಕ್ಯಾರಿ – ಹೆಡ್ ಅವರ 74 ರನ್ಗಳ ಜೊತೆಯಾಟ ತಂಡದ ಮೊತ್ತ ಹೆಚ್ಚಿಸಲು ಕಾರಣವಾಯಿತು.