ಬೆಂಗಳೂರು:- ಗೃಹಜ್ಯೋತಿ ಗ್ರಾಹಕರಿಗೆ ಶಾಕ್ ಎದುರಾಗಿದ್ದು, ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ನಲ್ಲಿ ದಿಢೀರ್ ಏರಿಕೆ ಆಗಿದೆ. ಹೀಗಾಗಿ ಫಲಾನುಭವಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಪತ್ನಿಯ ಚಿಕ್ಕ ತಪ್ಪಿಗೆ ಗಂಡನ ಘೋರ ಶಿಕ್ಷೆ: ಬೈಕ್ ನ ಹಿಂಭಾಗಕ್ಕೆ ಹೆಂಡತಿ ಕಾಲು ಕಟ್ಟಿ ಎಳೆದೊಯ್ದ ಗಂಡ!
ಗೃಹಜ್ಯೋತಿ ಯೋಜನೆಗೆ ಒಂದು ವರ್ಷವಾದ ಬೆನ್ನಲ್ಲೇ ಬೆಸ್ಕಾಂ ಹೊಸ ಕ್ಯಾತೆ ತೆಗೆದಿದ್ದು, ಇಷ್ಟು ದಿನ ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ನಲ್ಲಿ ದಿಢೀರನೇ 150, 200 ರೂಪಾಯಿ ಬಂದಿದ್ದು ಗೃಹಹ್ಯೋತಿ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗೃಹಜ್ಯೋತಿ ಫಲಾನುಭವಿಗಳಿಗೆ ಬಂದಿರುವ ಕರೆಂಟ್ ಬಿಲ್ನಲ್ಲಿ ಹಲವು ಸಮಸ್ಯರಗಳು ಕಂಡುಬರುತ್ತಿವೆ. ಅದರಲ್ಲಿ ಹೆವಿಲೋಡ್ ಹೆಸರಿನಲ್ಲಿ ಯದ್ವಾತದ್ವಾ ಶುಲ್ಕ ವಿಧಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈವರೆಗೆ ಶೂನ್ಯ ಬಿಲ್ ಬರುತ್ತಿದ್ದ ಗ್ರಾಹಕರು 200 ರೂ. ಬಿಲ್ ಬಂದಿದ್ದನ್ನು ನೋಡಿ ಶಾಕ್ ಆಗುತ್ತಿದ್ದಾರೆ.
ಪ್ರತಿ ತಿಂಗಳು ಎಷ್ಟು ಪ್ರಮಾಣದಲ್ಲಿ ವಿದ್ಯುತದ ಬಳಕೆ ಮಾಡುತ್ತಿದ್ದೆವೋ ಅಷ್ಟೇ ಮಾಡುತ್ತಿದ್ದೆವು. ಆದರೆ ಈಗ ಶೂನ್ಯ ಬಿಲ್ ಜಾಗದಲ್ಲಿ 200 ರೂಪಾಯಿ ಬಂದಿದ್ದು, ಬಿಲ್ ಪಾವತಿಸಬೇಕಾ ಅಥವಾ ಬೇಡವೇ ಎಂಬ ಯೋಚನೆಯಲ್ಲಿದ್ದೇವೆ. ಅಲ್ಲದೇ ಮೂರು ಜನರಿರುವ ಮನೆಗೆ ಈ ಹಿಂದೆ 400 ರೂ. ಬಿಲ್ ಬರುತ್ತಿತ್ತು. ಆದಾದ ಬಳಿಕ ಶೂನ್ಯ ಬಿಲ್ 3 ತಿಂಗಳು ಬಂತು. ನಂತರ ನಾವು ಹಿಂದೆ ಎಷ್ಟು ಬಿಲ್ ಕಟ್ಟುತ್ತಿದ್ದೆವೋ ಅಷ್ಟೇ ಬಿಲ್ ಬರ್ತಿದೆ. ಈ ಕುರಿತಾಗಿ ಬೆಸ್ಕಾಂ ಅಧಿಕಾರಿಗಳನ್ನ ಪ್ರಶ್ನಿಸಲು ಕರೆಮಾಡಿದರೆ ಯಾರರೂ ಸ್ಪಂದಿಸುವುದಿಲ್ಲ. ಸುಳ್ಳು ಗ್ಯಾರಂಟಿಗಳನ್ನ ಕೊಟ್ಟು ಜನರನ್ನು ಮೋಸ ಮಾಡಿದರು ಎಂದು ಫಾಲಾನುಭವಿ ಶ್ರೀನಿವಾಸ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ ಆಧರಿಸಿ ವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚಾಗಿದ್ದರೆ ಭದ್ರತಾ ಟೇವಣಿ ವಿಧಿಸಿಸುವುದು ಸಾಮಾನ್ಯವಾಗಿರುತ್ತದೆ. ಆದರೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವಾಗ ಎಷ್ಟು ಕೆವಿ ಸಾಮಾರ್ಥ್ಯದ ಸಂಪರ್ಕ ಪಡೆದಿರೋತ್ತಾರೋ ಅದಕ್ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದಾಗ ಹೆವಿಲೋಡ್ ದಂಡವನ್ನ ವಿಧಿಸಲಾಗುತ್ತದೆ. ಆದರೆ ಈಗ, 3 ಕೆವಿ ವೋಲ್ಟೋಜ್ ಸಾಮಾರ್ಥದ ವಿದ್ಯುತ್ ಸಂಪರ್ಕ ಪಡೆದಿದ್ದರೂ ಕೇವಲ 19 ಯುನಿಟ್ ಬಳಕೆಗೆ ಹೆಚ್ಚುವರಿ ಲೋಡ್ ಹೆಸರಿನಲ್ಲಿ ದಂಡ ವಿಧಿಸಲಾಗುತ್ತಿದೆ. ಇದರಿಂದಾಗಿ ಗೃಹಜ್ಯೋತಿ ಫಲಾನುಭವಿಗಳಿಗೆ ಶೂನ್ಯಬಿಲ್ ಬದಲು ಹೆಚ್ಚು ಮೊತ್ತದ ಬಿಲ್ ಬರುತ್ತಿದೆ.