ಶಿವಮೊಗ್ಗ: ನಷ್ಟದ ಸುಳಿಗೆ ಸಿಲುಕಿರುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟವು (ಶಿಮುಲ್), ರೈತರಿಂದ ಖರೀದಿಸುವ ಹಾಲಿನ ದರವನ್ನು 90 ಪೈಸೆ ಇಳಿಸಿದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟ ಶಿಮುಲ್, ಪ್ರತಿ ಲೀಟರ್ ಹಾಲಿನ ಮೇಲೆ 90 ಪೈಸೆ ಇಳಿಕೆ ಮಾಡಿದೆ. ಶಿಮುಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಾಗಿದೆ. ನಿನ್ನೆಯಿಂದಲೇ ಹಾಲಿನ ನೂತನ ದರ ಜಾರಿ ಆಗಿದೆ.
ಮಧುಮೇಹಿಗಳೇ ನಿತ್ಯ ಈ ಕೆಲಸ ಮಾಡುತ್ತಾ ಬನ್ನಿ: ಬ್ಲಡ್ ಶುಗರ್ ನಾರ್ಮಲ್ ಆಗಿಬಿಡತ್ತೆ!
ಶಿಮುಲ್ 7 ಕೋಟಿ ನಷ್ಟದಲ್ಲಿದ್ದು ಅದರಿಂದ ಹೊರಬರಲು ಖರೀದಿ ದರ ಇಳಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಆ ಮೂಲ ನಷ್ಟದ ನೆಪ ಹೇಳಿ ರೈತರಿಂದ ಖರೀದಿಸುವ ಹಾಲಿನ ದರ ಇಳಿಕೆ ಮಾಡಿದೆ. 33.03 ರೂ.ಗೆ ಹಾಲು ಉತ್ಪಾದಕರ ಸೊಸೈಟಿಗಳಿಂದ ಶಿಮುಲ್ ಖರೀದಿಸುತ್ತಿದೆ.
ಶಿವಮೊಗ್ಗ ಶಿಮುಲ್ ಒಕ್ಕೂಟ ಹಾಲಿನ ಉತ್ಪಾದನೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಸಾಕ್ಷಿಯಾಗಿತ್ತು. ಬ್ರೆಡ್, ಬನ್ ಸೇರಿದಂತೆ ಹಾಲಿನ ಉತ್ಪನ್ನ ತಯಾರಿಕೆ ಮಾಡಲಾಗುತ್ತದೆ. ನಿತ್ಯ 6.27 ಲಕ್ಷ ಲೀಟರ್ ನಿಂದ 7.84 ಲಕ್ಷ ಲೀಟರ್ಗೆ ಹಾಲಿನ ಉತ್ಪಾದನೆ ಮಾಡಲಾಗುತ್ತಿತ್ತು. ಕೆಲವೇ ತಿಂಗಳಲ್ಲಿ 1.60 ಲಕ್ಷ ಲೀಟರ್ ಹೆಚ್ಚಳವಾಗಿತ್ತು.
ಈ ಮೊದಲು ರೈತರಿಗೆ ನ್ಯಾಯಯುತ ಬೆಲೆಯನ್ನು ನೀಡಲಾಗುತ್ತಿತ್ತು. ಹಾಗಾಗಿ ಹಾಲಿನ ಉತ್ಪಾದನೆ ಹೆಚ್ಚಿದ್ದು, ಹಾಲಿನ ಪ್ಯಾಕ್ಗಳ ಪ್ರಮಾಣವನ್ನು 50 ಮಿಲಿ ಹೆಚ್ಚಿಸಲಾಗಿತ್ತು. ಅದಕ್ಕೆ ಅನುಗುಣವಾಗಿ 2 ಬೆಲೆ ಏರಿಕೆ ಕೂಡ ಮಾಡಲಾಗಿತ್ತು.