ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು ಮಾಡಿದ್ದು, ಇದು ಬಿಜೆಪಿಗೆ ಆಘಾತ ತಂದೊಡ್ಡಿದೆ. ಬಿಜೆಪಿ ಶಾಸಕ ಅಭಯ ಪಾಟೀಲ್ ಆಪ್ತ ಸದಸ್ಯರ ಸದಸ್ಯತ್ವ ರದ್ದು ಮಾಡಿ ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ಆದೇಶ ಹೊರಿಡಿಸಿದ್ದಾರೆ..
ಟಾಟಾ ವಿಂಗರ್ ವಾಹನ ಪಲ್ಟಿ: 14 ಕೂಲಿ ಕಾರ್ಮಿಕರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ!
ಬೆಳಗಾವಿ ದಕ್ಷಿಣ ಮತಕ್ಷೇತ್ರದ ವಾರ್ಡ್ ನಂಬರ್ 41ರ ಸದಸ್ಯ ಮಂಗೇಶ್ ಪವಾರ್, ವಾರ್ಡ್ ನಂಬರ್ 23ರ ಸದಸ್ಯ ಜಯಂತ್ ಜಾಧವ ಸದಸ್ಯತ್ವ ರದ್ದು ಮಾಡಿದ್ದಾರೆ. ಈ ಇಬ್ಬರು ಬಿಜೆಪಿ ಸದಸ್ಯರು ಲೋಕೋಪಯೋಗಿ ಇಲಾಖೆಯ ತಿನಿಸುಕಟ್ಟೆಯಲ್ಲಿ ಪತ್ನಿಯರ ಹೆಸರಿನಲ್ಲಿ ಮಳಿಗೆ ಪಡೆದಿದ್ಧಾರೆ ಎಂಬ ಆರೋಪವಿದೆ.ಪತ್ನಿ ನೀತಾ ಹೆಸರಿನಲ್ಲಿ ಮಂಗೇಶ್ ಪವಾರ, ಪತ್ನಿ ಸೋನಾಲಿ ಹೆಸರಿನಲ್ಲಿ ಜಯಂತ್ ಜಾಧವ ಮಳಿಗೆ ಪಡೆದಿದ್ದರು. ತಮ್ಮ ಪ್ರಭಾವ ಬೀರಿ ಪತ್ನಿಯರ ಹೆಸರಿನಲ್ಲಿ ಮಳಿಗೆ ಪಡೆದಿದ್ದಾರೆಂದು ಸುಜೀತ್ ಮುಳಗುಂದ ದೂರು ನೀಡಿದ್ದರು. ಈ ದೂರು ಆಧರಿಸಿ ಸುದೀರ್ಘ ವಿಚಾರಣೆ ನಡೆಸಿ ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು ಪಡೆಸಿದ ಪ್ರಾದೇಶಿಕ ಆಯುಕ್ತ ಆದೇಶಿಸಿದ್ದಾರೆ.