ಬೆಂಗಳೂರು: ಮದ್ಯ ಪ್ರಿಯರಿಗೆ ಹೊಸ ವರುಷದ ಹೊಸ್ತಿಲಲ್ಲಿ ದರ ಏರಿಕೆಯ ಬಿಸಿ ತಟ್ಟಿದೆ.ಮಧ್ಯಮ ವರ್ಗದ ಫೇವರೆಟ್ ಮದ್ಯಗಳ ಬೆಲೆ ಹೆಚ್ಚಾಗಿದ್ದು, ಹೊಸ ವರ್ಷಕ್ಜೆ ಕಂಠ ಪೂರ್ತಿ ಕುಡಿದು ಕುಪ್ಪಳಿಸಿದ ಜನರು ಈಗ ಎಣ್ಣೆ ಖರೀದಿಸಲು ಯೋಚಿಸುವಂತಾಗಿದೆ. ಎಣ್ಣೆನು ಸೋಡನು ಒಳ್ಳೆ ಫ್ರೆಂಡ್ಸ್, ಸಾರಾಯಿ ಅಂಗಡಿಯೆ ರಾಜಧಾನಿ , ಅಂತ ಕಂಠಪೂರ್ತಿ ಕುಡಿದು ಹೊಸ ವರ್ಷವನ್ನು ವೆಲ್ ಕಮ್ ಮಾಡಿದವರಿಗೆ ಈಗ ಒಂದೇ ಸಲ ತಲೆ ಗಿರ ಗಿರ ತಿರುಗುವಂತಾಗಿದೆ.
ಹೌದು ಹೊಸ ವರ್ಷದಂದು ಬರೋಬ್ಬರಿ 193 ಕೋಟಿ ಆದಾಯ ಗಳಿಸಿ ಮಂದಹಾಸ ಬೀರಿದ್ದ ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ. ಇಂದಿನಿಂದ ಮದ್ಯಮ ವರ್ಗದವರು ಕುಡಿಯುವ ಮದ್ಯದ ದರದಲ್ಲಿ ಏರಿಕೆಯಾಗಿದೆ. ಹೊಸ ವರ್ಷಕ್ಕೆ ಕಂಠ ಪೂರ್ತಿ ಕುಡಿದು ಕುಪ್ಪಳಿಸಿದ್ದ ಬಡವರು ಈಗ ಎಣ್ಣೆ ಖರೀದಿಸಲು ಯೋಚಿಸುವಂತಾಗಿದೆ.
ಅಂದಹಾಗೆ ದರ ಏರಿಕೆ ಆಗಿರುವ ಬ್ರ್ಯಾಂಡ್ ಯಾವುದು ಹಾಗೂ ಎಷ್ಟು ಅನ್ನೋದನ್ನ ನೋಡೋದಾದರೆ
- ಓಟಿ (180 ಎಂಎಲ್): ಈ ಹಿಂದೆ 90 ರುಪಾಯಿ, ಇಂದಿನಿಂದ 111ರುಪಾಯಿ.
- ಬಿಪಿ (180 ಎಂಎಲ್):ಹಿಂದೆ110 ರುಪಾಯಿ, ಇಂದಿನಿಂದ 145 ರುಪಾಯಿ.
- 8ಪಿಎಂ (180 ಎಂಎಲ್):ಹಿಂದೆ 90ರುಪಾಯಿ,ಇಂದಿನ ದರ 111ರುಪಾಯಿ.
ಅಂದಹಾಗೆ ಇಲ್ಲಿ ಮದ್ಯದ ದರವನ್ನ ಏಕಾ ಏಕಿ ಏರಿಸಿರುವುದು ಮದ್ಯ ತಯಾರಕ ಕಂಪನಿಗಳು. ಮದ್ಯ ಉತ್ಪಾದನಾ ಕಂಪನಿಗಳು ಕ್ವಾಟರ್ ಗೆ 20 ರಿಂದ 30 ರುಪಾಯಿ ಏರಿಸಿವೆ. ಈಗಾಗಲೇ ಮದ್ಯ ತಯಾರಿಕ ಕಂಪನಿಗಳು ಬಾರ್ ಮಾಲೀಕರಿಗೆ ಹಾಗೂ ಅಬಕಾರಿ ಇಲಾಖೆಗೆ ದರ ಏರಿಕೆಯ ಕುರಿತು ಸಂದೇಶ ಕಳುಹಿಸಿವೆ. ರಾಜ್ಯದ ಮದ್ಯಮ ಮತ್ತು ಕೆಳ ವರ್ಗದ ಜನ ಸೇವಿಸುವ ಬ್ರ್ಯಾಂಡ್ ಗಳ ದರ ಏರಿಕೆಯಾದರೆ ಮದ್ಯ ಮಾರಾಟದಲ್ಲಿ ಕುಸಿತವಾಗಬಹುದು ಎಂದು,
ಬಾರ್ ಮಾಲೀಕರ ಆಸೋಸಿಯೇಷನದ ಆಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಆದರೆ ಉತ್ಪಾದನಾ ವೆಚ್ಚ ಅಧಿಕವಾಗಿರಿವುದರಿಂದ ದರ ಏರಿಸದೆ ಇರಲು ಆಗುವುದಿಲ್ಲ ಎನ್ನುವುದು ಉತ್ಪಾದಕರ ಮಾತು. ತಮ್ಮ ನೆಚ್ಚಿನ ಬ್ರ್ಯಾಂಡ್ ಗಳ ದರ ಏರಿಕೆಗೆ ಮದ್ಯ ಪ್ರಿಯರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗ ಕೈಗೆಟುಕುವ ದರದಲ್ಲಿ ಎಣ್ಣೆ ಪಾದವೆ ಗತಿ ಎಂದು ಬೇರೆ ಬ್ರ್ಯಾಂಡ್ ಗೆ ಶಿಫ್ಟ್ ಆಗುವವರೆ ಹೆಚ್ಚು ಎಂದು ಹೇಳಲಾಗ್ತಿದೆ.