ನಟ ನಾಗಚೈತನ್ಯ ಹಾಗೂ ನಟಿ ಶೋಭೀತಾ ಧೂಳಿಪಾಲ ಮದುವೆಗೆ ಇನ್ನೆನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಈ ಮಧ್ಯೆ ಎರಡು ಮನೆಯಲ್ಲಿ ವಿವಾಹ ಪೂರ್ವ ಆಚರಣೆಗಳು ಶುರುವಾಗಿದೆ.
ಡಿಸೆಂಬರ್ 4 ರಂದು ನಾಗ ಚೈತನ್ಯ ಅವರನ್ನು ಶೋಭಿತಾ ವರಿಸಲಿದ್ದಾರೆ. ಮದುವೆ ಕಾರ್ಯಕ್ರಮದ ಆರಂಭದ ಭಾಗವಾಗಿ ಇಬ್ಬರೂ ಅರಶಿನ ಕುಂಕುಮ ನೀರಿನಲ್ಲಿ ಪವಿತ್ರವಾದ ಮಂಗಳಸ್ನಾನ ಮಾಡಿದ್ದಾರೆ. ಇದೀಗ ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ವಧುವಿಗೆ ಆಶೀರ್ವಾದವನ್ನು ಸಂಕೇತಿಸುವ ಮಂಗಳ ಸ್ನಾನ ಹರಿಶಿಣದ ರೀತಿಯೇ ಇರುತ್ತೆ. ತೆಲುಗು ವಿವಾಹ ಕಾರ್ಯಕ್ರಮಗಳಲ್ಲಿ ಮಂಗಳಸ್ನಾನಂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಒಂದು ಕಾರ್ಯಕ್ರಮದಲ್ಲಿ ವಧೂ ವರರಿಗೆ ಅರಶಿನ ಸ್ನಾನ ಮಾಡಿಸಲಾಗುತ್ತದೆ. ಇದೀಗ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರಿಗೆ ಮಂಗಳಸ್ನಾನ ಮಾಡಿಸಲಾಗಿದ್ದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಶುಕ್ರವಾರ ಮದುವೆ ಶಾಸ್ತ್ರಗಳು ಶುರುವಾಗಿದ್ದು, ಇದು ಪಾವಿತ್ರ್ಯತೆ, ಹೊಸತನವನ್ನು ಸೂಚಿಸುವ ಶಾಸ್ತ್ರವಾಗಿದ್ದು, ಖಣಾತ್ಮಕತೆಯನ್ನು ತೊಡೆದುಹಾಕಿ ಅದೃಷ್ಟ, ಆರೋಗ್ಯ, ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಸದ್ಯ ನಾಗ ಚೈತನ್ಯ ಹಾಗೂ ಶೋಭಿತಾ ಅವರು ಈ ಶಾಸ್ತ್ರ ಮಾಡಲಾಗಿದೆ.
ಶೋಭಿತಾ ಧೂಳಿಪಾಲ ಹಾಗೂ ನಾಗ ಚೈತನ್ಯ ಅವರು ತಮ್ಮ ಮದುವೆ ಸಂಭ್ರಮದಲ್ಲಿ ಫುಲ್ ಖುಷಿಯಾಗಿದ್ದಾರೆ. ನಾಗ ಚೈತನ್ಯ ಮತ್ತು ಶೋಭಿತಾ ಇಬ್ಬರೂ ಕೂಡಾ ಸಂಪ್ರಾದಯಿಕವಾಗಿ ಮದುವೆಯಾಗಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಈ ಜೋಡಿಯ ಮದುವೆ ಸಂಭ್ರಮದಲ್ಲಿ ಕುಟುಂಬಸ್ಥರು ಆಪ್ತರು ಮಾತ್ರವೇ ಭಾಗಿಯಾಗುತ್ತಿದ್ದಾರೆ.
ಡಿಸೆಂಬರ್ 4ರಂದು ಈ ಜೋಡಿಯ ಮದುವೆ ನಡೆಯಲಿದ್ದು ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ವಿವಾಹ ಕಾರ್ಯಕ್ರಮಗಳು ನಡೆಯಲಿದೆ. ಈಗಾಗಲೇ ಹೇಳಿರುವಂತೆ ನಟಿ ಶೋಭಿತಾ ಅವರು ತಮ್ಮ ಸಂಪ್ರದಾಯ, ಶಾಸ್ತ್ರಗಳ ಬಗ್ಗೆ ಹೆಚ್ಚು ಕನೆಕ್ಟ್ ಆಗಿದ್ದಾರೆ ಎಂದು ಹೇಳಲಾಗಿದೆ.
ಮದುವೆಯ ಆಮಂತ್ರಣಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಆಮಂತ್ರಣ ಪತ್ರಿಕೆಯ ವಿನ್ಯಾಸವೂ ತುಂಬಾ ಸುಂದರವಾಗಿದೆ. ಒಂದು ಬುಟ್ಟಿಯಲ್ಲಿ ಬಟ್ಟೆಯ ತುಂಡು, ಮರದ ಸುರುಳಿ, ಸಿಹಿತಿಂಡಿಗಳು, ಮಿಠಾಯಿಗಳು ಇತ್ಯಾದಿಗಳನ್ನು ಆಮಂತ್ರಣದೊಂದಿಗೆ ಇರಿಸಲಾಗುತ್ತದೆ. ಮದುವೆಯ ಆಮಂತ್ರಣ ಆಮಂತ್ರಣದಲ್ಲಿ ದೇವಾಲಯಗಳು, ಗಂಟೆಗಳು, ಬಾಳೆ ಮರಗಳು ಮತ್ತು ಹಸುವಿನ ಚಿತ್ರವಿದೆ.