ಬೆಂಗಳೂರು:- ನನ್ನ ತಾಕತ್ತಿನ ಬಗ್ಗೆ ಮಾತಾಡೋ ಯೋಗ್ಯತೆ ಶೋಭಾ ಕರಂದ್ಲಾಜೆಗಿಲ್ಲ ಎಂದು ಎಸ್ ಟಿ ಸೋಮಶೇಖರ್ ಕಿಡಿಕಾರಿದ್ದಾರೆ.
ಉಪಚುನಾವಣೆ: ಟೋಕನ್ ಮೂಲಕ ಹಣ ಹಂಚಿಕೆಗೆ ಮುಂದಾದ ಕಾಂಗ್ರೆಸ್: ಜೋಶಿ ಆರೋಪ!
ಶೋಭಾ ಕರಂದ್ಲಾಜೆಯವರಿಗೆ ನನ್ನ ತಾಕತ್ತಿನ ಬಗ್ಗೆ ಮಾತಾಡುವ ಕಿಂಚಿತ್ತೂ ಯೋಗ್ಯತೆ ಇಲ್ಲ, ತಾಕತ್ತು ನೋಡಲೇಬೇಕು ಅಂತಾದರೆ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ ಮತ್ತು ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ,
ಇಬ್ಬರೂ ಯಶವಂತಪುರದಲ್ಲಿ ಸ್ಪರ್ಧೆ ಮಾಡೋಣ, ಜನ ತಿರ್ಮಾನ ತೆಗೆದುಕೊಳ್ಳುತ್ತಾರೆ, ಅಗ ಯಾರ ತಾಕತ್ತು ಎಷ್ಟು ಅನ್ನೋದು ಗೊತ್ತಾಗುತ್ತದೆ, ಚಿಕ್ಕಮಗಳೂರು ಜನ ಉಗಿದಿದ್ದಕ್ಕೆ ಅವರು ಯಶವಂತಪುರ ಬರಬೇಕಾಯಿತು, ತಮ್ಮ ಕೆಲಸ ತಾವು ಮಾಡಿಕೊಂಡು ಸುಮ್ಮನಿರದಿದ್ದರೆ ಅವರ ಪಾಪದ ಕೊಡ ತುಂಬುತ್ತದೆ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಕಿಡಿಕಾರಿದ್ದಾರೆ.