ಬಾಗಲಕೋಟೆ :- ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ
ಬನಹಟ್ಟಿ ನಗರದ ಕೆಎಚಡಿಸಿ ನೇಕಾರರು ಬಾಂಗಿ ವೃತ್ತದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟವು ಇಂದು 13ನೇ ದಿನಕ್ಕೆ ಕಾಲಿಟ್ಟಿದೆ.
ನಟಿ ಶೋಭಿತಾ ಸಾವು ಕೇಸ್: ಆತ್ಮಹತ್ಯೆಯೋ!? ಕೊಲೆಯೋ?, ಬ್ರಹ್ಮಗಂಟಿಗೆ ಬಿಗಿಯಾಯ್ತಾ ಮೂರು ಗಂಟು
ಕೈಮಗ್ಗ ನಿಗಮದ ನೇಕಾರರು ತಮ್ಮ ಬೇಡಿಕೆಗಳಿಗಾಗಿ ನಡೆದುಬಂದ ಹೋರಾಟದ 12ದಿನಗಳ ವೇದಿಕೆಗೆ ಶಾಸಕ ಸಿದ್ದು ಸವದಿ ಭೇಟಿ ನೀಡದೇ ಇದ್ದು, ಶಾಸಕರ ಕಚೇರಿಗೆ ಮುತ್ತಿಗೆ ಹಾಕುವ ಹೇಳಿಕೆ ನೀಡಿದ ಬೆನ್ನಲ್ಲೆ, ಒಂದು ಗಂಟೆಗೂ ಅಧಿಕ ಕಾಲ ಪೊಲೀಸರು ಮತ್ತು ನೇಕಾರರ ಮುಖಂಡರ ನಡುವೆ ಮಾತುಕತೆ ನಡೆದು ಕೊನೆಗೂ ಶಾಸಕರ ಕಚೇರಿಯಲ್ಲಿ ನೇಕಾರರಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಯಿತು.
ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಸೇರಿ ನೇಕಾರರು ತಮ್ಮ ಬೇಡಿಕೆಗಳನ್ನು ಶಾಸಕರ ಮುಂದೆ ಇಟ್ಟರು.
ಮಾತಿಗೆ ಮಾತು ಬೆಳೆದು, ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ನೀನು ಕಳೆದ ಚುನಾವಣೆಯಲ್ಲಿ ಸಚಿವ ಶಿವಾನಂದ ಪಾಟೀಲ ಪರ ಪ್ರಚಾರ ಮಾಡಿದ್ದಿರಿ ಎಂದು ಆರೋಪಿಸುತ್ತಿದ್ದಂತೆ ಶಿವಲಿಂಗ ಟಿರಕಿ ನಾನೂ ಯಾವುದೇ ಪಕ್ಷದ ಪರ ಕೆಲಸ ಮಾಡಿಲ್ಲ. ಅದಕ್ಕೆ ಯಾವುದೇ ದೇವರ ಮುಂದೆ ಪ್ರಮಾಣಮಾಡ್ತಿನಿ, ನೀವೂ ನನ್ನ ತಲೆಯ ಮೇಲೆ ಕೈಇಟ್ಟು ಪ್ರಮಾಣ ಮಾಡುವಂತೆ ಜಟಾಪಟಿ ನಡೆಯಿತು.
ಕೊನೆಗೆ ಪೊಲೀಸರು ಮದ್ಯಪ್ರವೇಶಿಸಿ, ವಾತಾವರಣ ತಿಳಿಗೊಳಿಸಿದರು. ಈಗಾಗಲೇ ಸಾಕಷ್ಟು ನೇಕಾರರಿಗೆ ನ್ಯಾಯವನ್ನು ಒದಗಿಸಿ ಕೊಟ್ಟಿದ್ದೇನೆ. ನಾನು ನೇಕಾರರ ನಿಗಮ ಅಧ್ಯಕ್ಷ ಇಂಧ ಸಂದರ್ಭದಲ್ಲಿ ನೂಲಿಗೆ ಕೊರತೆ ಆಗದಂತೆ ನೋಡಿಕೊಂಡಿದ್ದೇನೆ.
ಇನ್ನು ನಿಮ್ಮ ಹಲವಾರು ಸಮಸ್ಯೆಗಳನ್ನ ಬೆಳಗಾವಿಯ ಅಧಿವೇಶನದಲ್ಲಿ ನೇಕಾರರ ಪರವಾಗಿ ಧ್ವನಿ ಎತ್ತುತ್ತೇನೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ