ಬೆಂಗಳೂರು: ಶಿವರಾಜ್ ಕುಮಾರ್ ಅವರಿಗೆ ಇಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಅನಾರೋಗ್ಯದ ಹಿನ್ನೆಲೆ ಸರ್ಜರಿಗಾಗಿ ಅಮೆರಿಕಾಗೆ ಹೋಗಿದ್ದು, ಅಮೇರಿಕಾದ ಕಾಲಮಾನ ಪ್ರಕಾರ ಬೆಳಗ್ಗೆ 9ರಿಂದ10 ಗಂಟೆ ವೇಳೆಗೆ ಶಸ್ತ್ರಚಿಕಿತ್ಸೆ ನಡೆಯಲಿದೆ ಎನ್ನಲಾಗಿದೆ. ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆ ವೇಳೆಗೆ ಶಿವಣ್ಣನಿಗೆ ಸರ್ಜರಿ ನಡೆಯಲಿದೆ. ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿರುವ ಶಿವಣ್ಣ ಅವರು ಶಸ್ತ್ರಚಿಕಿತ್ಸೆಗಾಗಿ ಡಿ.18 ರಂದು ಬೆಂಗಳೂರಿನಿಂದ ಅಮೆರಿಕಾಗೆ ಪ್ರಯಾಣ ಮಾಡಿದ್ದರು.
ಇದೀಗ ಅವರ ಅಭಿಮಾನಿಗಳು ಬೆಂಗಳೂರಿನಲ್ಲಿ ದೇವರ ಮೊರೆ ಹೋಗಿದ್ದು ಸರ್ಜರಿ ಯಶಸ್ವಿಯಾಗಿ, ಆರೋಗ್ಯವಾಗಿ ಶಿವಣ್ಣ ತವರಿಗೆ ಮರಳಲಿ ಎಂದು ಮಾಗಡಿ ರೋಡ್ನಲ್ಲಿನ ವಿರೇಶ್ ಥಿಯೇಟರ್ ಬಳಿ ಇರುವ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
ಕಹಿಯಾಗಿದ್ದರೂ ಈ ಜ್ಯೂಸ್ ಅಮೃತಕ್ಕೆ ಸಮಾನ: ಹಾಗಲಕಾಯಿ ಜ್ಯೂಸ್ ಪ್ರಯೋಜನ ತಿಳಿದ್ರೆ ಶಾಕ್ ಆಗ್ತೀರಾ..!?
ಪ್ರಸ್ತುತ ಅಮೆರಿಕದಲ್ಲಿ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಡಾ.ಶಿವರಾಜ್ಕುಮಾರ್ ಅವರು ಇಂದು ಬೆಳಗ್ಗೆ 10 ಗಂಟೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿಯೇ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಶಿವಣ್ಣನಿಗೆ ಸರ್ಜರಿ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸಲು ವಿಶೇಷ ಪೂಜೆ, ಹೋಮಗಳು ಮಾಡಿದ್ದಾರೆ ಶಿವಣ್ಣ ಕಾರ್ ಡ್ರೈವರ್ ಆಗಿರೋ ಗೋವಿಂದಣ್ಣ. 32 ವರ್ಷಗಳಿಂದ ಶಿವಣ್ಣ ಕಾರ್ ಡ್ರೈವರ್ ಆಗಿದ್ದಾರೆ ಗೋವಿಂದಣ್ಣ ಮಲ್ಲೇಶ್ವರಂನಲ್ಲಿರೋ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.