ಶಿವಮೊಗ್ಗ: ಮಲೆನಾಡಿನಲ್ಲಿ ಈ ಬಾರಿ ಅಡಿಕೆ ಫಸಲು ಕೈಕೊಟ್ಟು ಅಡಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ರೈತ ಜೀವನ ಸಾಗಿಸುವುದೇ ಕಷ್ಟವಾಗಿದೆ. ಆದರೂ ಹೇಗೋ ಈ ಬಾರಿ ಇಲ್ಲದಿದ್ದರೆ ಮುಂದಿನ ಬಾರಿಯಾದರೂ ಫಸಲು ಬರಬಹುದೆಂದು ರೈತನು ತನ್ನನ್ನು ತಾನು ಸಮಾಧಾನ ಪಡಿಸಿಕೊಳ್ಳುತ್ತಿದ್ದಾನೆ. ಅಷ್ಟೇ ಅಲ್ಲದೆ ಅಡಿಕೆ ಬೆಲೆಯು ಏರಿಳಿತಗಳು ಸಹ ರೈತನಿಗೆ ಗಾಯದ ಮೇಲೆ ಬರೆ ಎಳೆಂತಾಗಿದೆ.
ಇದರ ನಡುವೆ ಕಾರ್ಗಲ್ ನ ರೈತ ಮಂಜುನಾಥ್ ಗೆ ತಮ್ಮ ತೋಟದಲ್ಲಿ ನಡೆದ ದೃಶ್ಯಾವಳಿಯನ್ನು ನೋಡಿ ಬರಸಿಡಿಲೇ ಬಡಿದಂತಾಗಿದೆ. ಅದೇನೆಂದರೆ ಸಾಗರ ತಾಲೂಕಿನ ಕಾರ್ಗಲ್ ಗ್ರಾಮದಲ್ಲಿ ಮಂಜುನಾಥ್ ಎಂಬ ರೈತನಿಗೆ ಸೇರಿದ ಸುಮಾರು 350 ರಿಂದ 400 ಅಡಿಕೆ ಮರಗಳನ್ನು ಕಿಡಿಗೇಡಿಗಳು ಕಡಿದು ನಾಶಪಡಿಸಿದ್ದಾರೆ. ಈ ಹಿಂದೆ ಮಂಜುನಾಥ್ ರವರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆಧಾರದ ಮೇಲೆ ಕೇಸ್ ದಾಖಲಿಸಲಾಗಿತ್ತು.
ಪುರುಷರ ಫಲವತ್ತತೆ ಹೆಚ್ಚಿಸೋಕು ಸೈ! ದೇಹದ ತೂಕ ಇಳಿಸೋಕು ಸೈ ಈ ಸಿಹಿ ಕುಂಬಳಕಾಯಿ
ಆದ್ದರಿಂದ ಅರಣ್ಯ ಇಲಾಖೆ ರೈತನ ಒಂದು ಎಕರೆ 20 ಗುಂಟೆ ಜಾಗವನ್ನು ಬಿಟ್ಟು ಉಳಿದ ಎಲ್ಲಾ ಸ್ಥಳಗಳನ್ನು ತೆರವುಗೊಳಿಸ ಬೇಕೆಂಬ ಆದೇಶವನ್ನು ಹೊರಡಿಸಿತ್ತು. ಆದರೆ ಅತಿಕ್ರಮಣ ಮಾಡಿಕೊಂಡ ಜಾಗವನ್ನು ಬಿಟ್ಟು ಫಸಲು ಬರುತ್ತಿರುವ 400 ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ನಾಶಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅದನ್ನು ಜೆಸಿಬಿ ಯಂತ್ರದ ಮೂಲಕ ನೆಲಸಮ ಮಾಡಿದ್ದಾರೆ.
ಈ ಹಿಂದೆ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಫಸಲು ಬಿಡುತ್ತಿರುವ ಯಾವುದೇ ಮರಗಳನ್ನು ಕಡಿಯಬಾರದೆಂದು ವಿಡಿಯೋ ಮೂಲಕ ತಿಳಿಸಿದ್ದರು. ಆದರೂ ಇಂತಹ ಕೃತ್ಯ ನಡೆಸಿದ್ದಾರೆ. ಎಂದು ರೈತ ಮಂಜುನಾಥ್ ಅಳುವು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅರಣ್ಯದಲ್ಲಿ ವಾಸಿಸುವ ಕಾರ್ಗಲ್ ಜನತೆಗೆ ಈ ಕುರಿತು ಎಚ್ಚರದಿಂದ ಇರ್ಬೇಕು ಎಂದಿದ್ದಾರೆ