‘ಶಿಷ್ಯ’ (Shishya Film) ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ದೀಪಕ್, ಫ್ಯಾಷನ್ ಡಿಸೈನರ್ ಬೃಂದಾ (Brunda Gowda) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನವಜೋಡಿಗೆ ಆಪ್ತರು, ಗಣ್ಯರು, ಅಭಿಮಾನಿಗಳು ಶುಭಕೋರಿದ್ದಾರೆ.
ಇತ್ತೀಚೆಗೆ ಬೃಂದಾ ಜೊತೆ ದೀಪಕ್ (Actor Deepak) ಸರಳವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇದೀಗ ಬೆಂಗಳೂರಿನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ದೀಪಕ್-ಬೃಂದಾ ಮದುವೆಯಾಗಿದ್ದಾರೆ. ಇದು ಗುರುಹಿರಿಯರು ಸಮ್ಮತಿಸಿದ ಅರೇಂಜ್ ಮ್ಯಾರೇಜ್ ಆಗಿದೆ.
ದೀಪಕ್-ಬೃಂದಾ ಮದುವೆಗೆ ಹೆಚ್.ಡಿ ಕುಮಾರಸ್ವಾಮಿ, ಪ್ರಜ್ವಲ್ ದೇವರಾಜ್ ಸೇರಿದಂತೆ ಅನೇಕರು ಆರತಕ್ಷತೆಗೆ ಭಾಗವಹಿಸಿ ಶುಭಕೋರಿದ್ದರು.