ಶಿವಮೊಗ್ಗ:- ಶಿವಮೊಗ್ಗದಲ್ಲಿ ನೆಲೆಸಿದ್ದ 7 ವಿದೇಶಿ ಪ್ರಜೆಗಳನ್ನು ಬಂಧಿಸುವಲ್ಲಿ ಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತಪ್ಪೇ ಮಾಡದ ನನ್ನನ್ನು ಜೈಲಿಗೆ ಹಾಕಿದ್ರೂ, ಅವರನ್ನು ಸುಮ್ಮನೆ ಬಿಡಲ್ಲ: ನಾಗೇಂದ್ರ!
ಇವರು,ಬಾಂಗ್ಲಾ ಪ್ರಜೆಗಳಾಗಿದ್ದು, ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದು, ಇವರ ಬಳಿ ಮಂಗಳೂರು ವಿಳಾಸ ಇರುವ ಆಧಾರ್ ಕಾರ್ಡ್ ಪತ್ತೆ ಆಗಿದೆ. ಕೆಲಸಕ್ಕೆ ಮೇಸ್ತ್ರಿ ಕರೆದುಕೊಂಡು ಬಂದಿರುವ ಬಗ್ಗೆ ಮಾಹಿತಿ ಇದೆ. ಬಾಂಗ್ಲಾದೇಶದ 7 ಪ್ರಜೆಗಳನ್ನ ಜಯನಗರ ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಇತ್ತೀಚೆಗೆ ಕೆಲವು ದಿನಗಳಿಂದ ರಾಜ್ಯದಲ್ಲಿ ಪಾಕಿಸ್ತಾನಿ ಪ್ರಜೆಗಳು ವಾಸ್ತವ್ಯ ಹೂಡಿದ್ದು ಬಯಲಾಗಿತ್ತು. ಇದರ ಬೆನ್ನಲ್ಲೇ ಉಡುಪಿಯ ಮಲ್ಪೆಯಲ್ಲಿ ಬಾಂಗ್ಲಾ ದೇಶೀ ಪ್ರಜೆಗಳು ಇರುವುದು ಪತ್ತೆಯಾಗಿದೆ.