ಇಂಡಿಯನ್ ಪ್ರೀಮಿಯರ್ ಲೀಗ್ಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಗುಡ್ ಬೈ ಹೇಳಿದ್ದಾರೆ.
ಜೂನಿಯರ್ ವಿದ್ಯಾರ್ಥಿಗಳಿಗೆ ರ್ಯಾಗಿಂಗ್: ಕಟ್ಟಿಗೆ, ಬೆಲ್ಟ್ನಿಂದ ಹಲ್ಲೆ ಮಾಡಿದ ಸೀನಿಯರ್ ಸ್ಟೂಡೆಂಟ್ಸ್!
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಧವನ್ ವಿದಾಯ ಹೇಳಿದ್ದರು. ಇದಾಗ್ಯೂ ಅವರು ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೀಗ ಇಂಡಿಯನ್ ಪ್ರೀಮಿಯರ್ ಲೀಗ್ಗೂ ಶಿಖರ್ ಧವನ್ ವಿದಾಯ ಹೇಳಿರುವುದು ಖಚಿತವಾಗಿದೆ.
ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಶಿಖರ್ ಧವನ್ ಮುಂಬರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಆಡಲಿದ್ದಾರೆ. ನಿವೃತ್ತ ಆಟಗಾರರು ಕಣಕ್ಕಿಳಿಯಲಿರುವ ಈ ಲೀಗ್ನಲ್ಲಿ ಕಾಣಿಸಿಕೊಳ್ಳಲು ಬಿಸಿಸಿಐ ಕಡೆಯಿಂದ ಎನ್ಒಸಿ ಪತ್ರವನ್ನು ಪಡೆಯಬೇಕಾಗುತ್ತದೆ. ನಿರಾಕ್ಷೇಪಣಾ ಪತ್ರ ಪಡೆದರೆ ಅವರು ಐಪಿಎಲ್ ಆಡಲು ಅರ್ಹರಾಗಿರುವುದಿಲ್ಲ.
ಅಂದರೆ ಬಿಸಿಸಿಐ ನಿಯಮದ ಪ್ರಕಾರ ಐಪಿಎಲ್ ಆಡುವ ಭಾರತೀಯ ಆಟಗಾರರು ಯಾವುದೇ ಫ್ರಾಂಚೈಸಿ ಲೀಗ್ಗಳಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ಇತರೆ ಲೀಗ್ಗಳಲ್ಲಿ ಕಾಣಿಸಿಕೊಂಡರೆ ಅವರು ಐಪಿಎಲ್ಗೆ ಅನರ್ಹರಾಗಲಿದ್ದಾರೆ. ಹೀಗಾಗಿಯೇ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.