ಪಾಕಿಸ್ತಾನದ ಯಾವುದೇ ಕ್ರೀಡಾಂಗಣಗಳು ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜನೆಗೆ ಯೋಗ್ಯವಾದುದ್ದಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸೀನ್ ನಖ್ವೀ ಒಪ್ಪಿಕೊಂಡಿದ್ದಾರೆ. 2025ರ ಸಾಲಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪಾಕಿಸ್ತಾನದಲ್ಲಿ ಆಯೋಜನೆ ಆಗಬೇಕಿದೆ.
ಲಾಹೋರ್ನಲ್ಲಿರುವ ಗದಾಫಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಟ್ಟಡ ಮರು ನಿರ್ಮಾಣ ಕೆಲಸಗಳ ಮೇಲ್ವಿಚಾರಣೆ ನಡೆಸಿದ ಬಳಿಕ ಮೊಹ್ಸೀನ್ ನಖ್ವೀ ಈ ಹೇಳಿಕೆ ನೀಡಿದ್ದಾರೆ. ಹಳೇ ಕ್ರೀಡಾಂಗಣದ ಆದ ಕಾರಣಕ್ಕೆ ದುರಸ್ತೀಕರಣದ ಕೆಲಸ ಕಷ್ಟವಾಗಿದೆ. ಆದರೂ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಹೊತ್ತಿಗೆ ಎಲ್ಲ ಕೆಲಸಗಳು ಅಂತ್ಯಗೊಳ್ಳಲಿದೆ ಎಂಬ ವಿಶ್ವಾಸ ಹೊರಹಾಕಿದ್ದಾರೆ.
ಕರಾಚಿಯ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ರಾವಲಪಿಂಡಿಯ ಪಿಂಡಿ ಕ್ರಿಕೆಟ್ ಸ್ಟೇಡಿಯಂ ಮತ್ತು ಲಾಹೋರ್ನ ಗದಾಫಿ ಸ್ಟೇಡಿಯಂ ಎಲ್ಲವನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜನೆಗೆ ತಕ್ಕಂತೆ ದುರಸ್ಥಿಕರಣ ಮಾಡಲಾಗುತ್ತಿರುವುದಾಗಿ ಮೊಹ್ಸೀನ್ ನಖ್ವೀ ಮಾಹಿತಿ ನೀಡಿದ್ದಾರೆ. 8 ಅಂತಾರಾಷ್ಟ್ರೀಯ ತಂಡಗಳನ್ನು ಹೊಂದಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಗೆ ಈ ಕೆಲಸ ಮೊದಲ ಆದ್ಯತೆ ಮೇರೆಗೆ ಆಗಬೇಕಿದೆ ಎಂದಿದ್ದಾರೆ.