ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ನ (Wrestling Federation of India) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಅವರ ನಿವಾಸದಲ್ಲಿದ್ದ ಕಚೇರಿಯನ್ನು ನವದೆಹಲಿಯ ಹರಿ ನಗರಕ್ಕೆ ಸ್ಥಳಾಂತರಿಸಲಾಗಿದೆ.
ಸಂಜಯ್ ಸಿಂಗ್ ಮುಖ್ಯಸ್ಥರಾಗಿ ಆಯ್ಕೆಯಾದ ಮೂರು ದಿನಗಳ ನಂತರವೂ ಬ್ರಿಜ್ ಭೂಷಣ್ ಅವರ ನಿವಾಸದಿಂದ ಕಚೇರಿ ನಡೆಯುತ್ತಿರುವುದಕ್ಕೆ ಕ್ರೀಡಾ ಸಚಿವಾಲಯವು ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೇ ಹೊಸದಾಗಿ ರಚಿಸಲಾದ ಡಬ್ಲ್ಯುಎಫ್ಐ ಸಮಿತಿಯನ್ನು ಡಿ.24 ರಂದು ಅಮಾನತುಗೊಳಿಸಲು ಇದು ಒಂದು ಕಾರಣ ಎಂದು ಉಲ್ಲೇಖಿಸಲಾಗಿದೆ.
ಲಾಕ್ ಆಗುತ್ತಾ ರಾಜಧಾನಿ ಬೆಂಗಳೂರು – ಕನ್ನಡ ಸಂಘಟನೆಗಳು ಕೊಟ್ಟ ಎಚ್ಚರಿಕೆ ಏನು!?
ಫೆಡರೇಶನ್ನ ವ್ಯವಹಾರವನ್ನು ಮಾಜಿ ಪದಾಧಿಕಾರಿಗಳ (ಬ್ರಿಜ್ ಭೂಷಣ್) ನಿಯಂತ್ರಣದ ಸ್ಥಳದಿಂದ ನಡೆಸಲಾಗುತ್ತಿದೆ. ಆಟಗಾರರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹೊತ್ತಿನಲ್ಲಿ ಹಾಗೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಇದು ಸರಿಯಾದ ನಡೆಯಲ್ಲ. ಮಾಜಿ ಪದಾಧಿಕಾರಿಗಳ ಸಂಪೂರ್ಣ ನಿಯಂತ್ರಣದಲ್ಲಿದೆ. ಇದು ಕ್ರೀಡಾ ಸಂಹಿತೆಗೆ ಅನುಗುಣವಾಗಿಲ್ಲ ಎಂದು ಸಚಿವಾಲಯದ ಪತ್ರದಲ್ಲಿ ತಿಳಿಸಿದೆ.
ಬ್ರಿಜ್ ಭೂಷಣ್ ಅವರ ಆಪ್ತ ಸಹಾಯಕ ಸಂಜಯ್ ಸಿಂಗ್ ಅವರು ಡಿ.21 ರಂದು ಡಬ್ಲ್ಯುಎಫ್ಐ ಮುಖ್ಯಸ್ಥರಾಗಿ ಆಯ್ಕೆಯಾದ ನಂತರ, ಸಾಕ್ಷಿ ಕುಸ್ತಿಯಿಂದ ನಿವೃತ್ತಿ ಹೊಂದಲು ನಿರ್ಧರಿಸಿದರು. ಭಜರಂಗ್ ಅವರ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದರು ಮತ್ತು ವಿನೇಶ್ ಅವರಿಗೆ ಖೇಲ್ ರತ್ನ ಹಾಗೂ ಅರ್ಜುನ್ ಪ್ರಶಸ್ತಿಯನ್ನು ಹಿಂದಿರುಗಿಸಲು ನಿರ್ದರಿಸಿದರು.
ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪೂನಿಯಾ (Bajrang Punia), ಸಾಕ್ಷಿ ಮಲಿಕ್ (Sakshi Malik) ಮತ್ತು ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಹಲವಾರು ಉನ್ನತ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಈ ಪ್ರಕರಣ ದೆಹಲಿ ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ.