ಶಿಡ್ಲಘಟ್ಟ: ಪಕ್ಷಕ್ಕಿಂತಲೂ ಅಭಿವೃದ್ದಿ ಮುಖ್ಯ, ಗ್ರಾಮೀಣ ಭಾಗದಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಂಚಾಯ್ತಿಯನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯಬೇಕು ಆಂಜಿನಪ್ಪ (ಪುಟ್ಟು) ಕಿವಿ ಮಾತು ಹೇಳಿದರು.
ತಾಲ್ಲೂಕಿನ ಪಲ್ಲಿಚೆರ್ಲು ಗ್ರಾ ಪಂ ಅಧ್ಯಕ್ಷೆಯಾಗಿ ವೀಣಾ ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಗಂಗರತ್ನ ಡಿಆರ್ ದೇವರಾಜ್ ಅವಿರೋಧವಾಗಿ ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.
ಹಿಂದಿನ ಒಪ್ಪಂದದಂತೆ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಬೆಂಬಲಿತ ಮೀನಾ ವೆಂಕಟೇಶ್ ಹಾಗು ಕಾಂಗ್ರೆಸ್ ಬೆಂಬಲಿತ ಗಂಗರತ್ನ ಡಿಆರ್ ದೇವರಾಜ್ ಆಯ್ಕೆ ಆಗುವ ಮೂಲಕ ಸಮ್ಮಿಶ್ರ ಆಡಳಿತ ಅಧಿಕಾರ ಚುಕ್ಕಾಣಿ ಹಿಡಿಯಿತು.
ಈ ಸಂದರ್ಭದಲ್ಲಿ ನೂತನ ಅಧ್ಯೆಕ್ಷೆ ಹಾಗೂ ಉಪಾಧ್ಯಕ್ಷರಿಗೆ ಶುಭ ಹಾರೈಸಿ ಕಾಂಗ್ರೆಸ್ ಮುಖಂಡ ಆಂಜಿನಪ್ಪ (ಪುಟ್ಟು) ಹಾರೈಸಿದರು. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಉತ್ತಮ ಆಡಳಿತ ನೀಡುವ ಮೂಲಕ ಜಿಲ್ಲೆಯಲ್ಲೇ ಮಾದರಿ ಪಂಚಾಯ್ತಿಯಾಗಿ ಹೊರ ಹೊಮ್ಮಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಪಿಡಿಒ ರಮೇಶ್ , ಕಾರ್ಯದರ್ಶಿ ಗೋಪಾಲಕೃಷ್ಣ, ಮುಖಂಡರಾದ ಸೋಮಶೇಖರ್, ತರಬಹಳ್ಳಿ ದೇವರಾಜ್, ಲಕ್ಷ್ಮೀನಾರಾಯಣ, ಡಿಆರ್ ದೇವರಾಜ್ ಇನ್ನಿತರರು ಉಪಸ್ಥಿತರಿದ್ದರು.