ಶಿಡ್ಲಘಟ್ಟ: ಚೀಮಂಗಲ ಗ್ರಾ ಪಂ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ತಾಲ್ಲೂಕಿನ ಚೀಮಂಗಲ ಗ್ರಾ ಪಂ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಗಳಿಗೆ ಎರಡನೇ ಅವಧಿಗೆ ಮರು ಆಯ್ಕೆ ನೆಡದಿದ್ದು, ಅತ್ತಿಗಾನಹಳ್ಳಿ ಗ್ರಾಮದವರಾದ ಮಹದೇವಮ್ಮ ಅಧ್ಯಕ್ಷರಾಗಿ ಹಾಗು ಅದೇ ಗ್ರಾಮದ ಮೂರ್ತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಆಂಜಿನಪ್ಪ (ಪುಟ್ಟು) ನೂತನವಾಗಿ ಆಯ್ಕೆ ಆಗಿರುವ ಅಧ್ಯೆಕ್ಷೆ ಹಾಗೂ ಉಪಾಧ್ಯಕ್ಷರಿಗೆ ಶುಭ ಹಾರೈಸಿ ಮಾತನಾಡಿದರು. ಈ ಹಿಂದೆ ಕೊಟ್ಟ ಮಾತಿನಂತೆ ಬಿಜೆಪಿ ಬೆಂಬಲಿತ ಸದಸ್ಯರು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ,
ಅಧಿಕಾರ ಯಾರದೇ ಇದ್ದರೂ, ಎಲ್ಲರೂ ಒಂದಾಗಿ ಪಕ್ಷಾತೀತವಾಗಿ ಕೆಲಸ ಮಾಡಬೇಕು ಆಗ ಮಾತ್ರ ಅಭಿವೃದ್ಧಿ ಸಾದ್ಯ ಎಂದರು. ಚೀಮಂಗಲ ಗ್ರಾ ಪಂ ಈಗಾಗಲೇ ಮಾದರಿ ಪಂಚಾಯ್ತಿ ಯಾಗಿ ಗುರ್ತಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ದಿ ಕೆಲಸಗಳಿಂದ ಇನ್ನೂ ಹೆಚ್ಚಿನ ಪ್ರಖ್ಯಾತಿ ಪಡೆಯುಂತಾಗಬೇಕು ಎಂದು ಆಶಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.