ಶಿಡ್ಲಘಟ್ಟ: ಅನಾರೋಗ್ಯದಿಂದ ಬಳಲುತ್ತಿದ್ದ ವಿಕಲ ಚೇತನ ಮಹಿಳೆಗೆ ಸಿ ಎಂ ಬೈರೇಗೌಡ ಚಾರಿಟಬಲ್ ಟ್ರಸ್ಟ್ನ ರಾಷ್ಟ್ರೀಯ ಅಧ್ಯಕ್ಷ, ತಾಲ್ಲೂಕಿನ ಚೀಮನಹಳ್ಳಿ ಗ್ರಾಮದ ಸಿ ಎಂ ಬೈರೇಗೌಡ ವೀಲ್ ಚೇರ್ ನೀಡಿ ಅವರ ಸಹಾಯಕ್ಕೆ ನಿಲ್ಲುವ ಮೂಲಕ ನಿಸ್ಸಹಾಯಕ ಮಹಿಳೆಗೆ ಆಸರೆ ಆಗಿದ್ದಾರೆ.
Belagavi: ಇಡೀ ರಾತ್ರಿ ಪೊಲೀಸರು ಸುತ್ತಾಡಿಸಿದ್ದಾರೆ: ನನಗೆ ಜೀವಭಯವಿದೆ ಎಂದ CT ರವಿ!
ಕೋಲಾರ ನಗರದ ವಿಜಯನಗರದ ಹಾರುವಳ್ಳಿ ರಸ್ತೆಯಲ್ಲಿರುವ ವೀರಾಂಜನೇಯ ಸ್ವಾಮಿ ದೇವಾಲಯದ ಹತ್ತಿರ ವಾಸವಿರುವ ಸೌಮ್ಯ (42) ಸಹಾಯ ಬೇಡಿ ಸಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿದ್ದರು. ವಿಡಿಯೋ ನೋಡಿದ ಬೈರೇಗೌಡ ಮಹಿಳೆಯ ಸಹಾಯಕ್ಕೆ ಧಾವಿಸಿದ್ದಾರೆ.
ಮಹಿಳೆಗೆ ಶಾಲೆಗೆ ಹೋಗುತ್ತಿರುವ ಒಬ್ಬ ಮಗಳಿದ್ದು, ಮಗಳ ವಿದ್ಯಾಭ್ಯಾಸ ಮತ್ತು ತನ್ನ ಅನಾರೋಗ್ಯ ಚಿಕಿತ್ಸಾ ವೆಚ್ಚಕ್ಕಾಗಿ ಅನೇಕರಲ್ಲಿ ಅಂಗಲಾಚಿದ್ದರು. ಆದರೆ ಈ ವರೆಗೆ ಯಾರೊಬ್ಬರೂ ಅವರ ಸಹಾಯಕ್ಕೆ ನಿಂತಿರಲಿಲ್ಲ ಎಂದು ಆಕೆ ತನ್ನ ದುಖಃ ತೋಡಿಕೊಂಡಿದ್ದಾಳೆ. ಕೆಲವರು ಸಹಾಯ ಮಾಡುವ ನೆಪದಲ್ಲಿ ಕ್ಯೂ ಆರ್ ಕೋಡ್ ಮಾಡಿಸಿ ತಮ್ಮ ಖಾತೆಗೆ ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ಹೇಳಿಕೊಂಡರು.
ಸದ್ಯ ಬೈರೇಗೌಡರ ಸಹಾಯದಿಂದ ಆಸ್ಪತ್ರೆಗೆ ಹೋಗಿ ಬರಲು ವೀಲ್ ಚೇರ್ ದೊರೆತಂತಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಿಸ್ಸಹಾಯಕ ಮಹಿಳೆ ಸೌಮ್ಯಾರ ಸಹಾಯಕ್ಕೆ ಸಮಾಜ ಸೇವಕರು, ಧನಿಕರು, ಹಾಗೂ ಸಂಘ ಸಂಸ್ಥೆಗಳು ಮುಂದೆ ಬಂದು ಕೈಲಾದ ಸಹಾಯವನ್ನು ಮಾಡಬೇಕು ಎಂದು ಸಮಾಜ ಸೇವಕ ಸಿ ಎಂ ಬೈರೇಗೌಡ ಮನವಿ ಮಾಡಿದ್ದಾರೆ.