ಮಂಗಳೂರು:– ಶೆಟ್ಟರ್ ಡೀಸೆಂಟ್ ಜಂಟಲ್ ಮ್ಯಾನ್, ಕಾಂಗ್ರೆಸ್ಸಿಗರು ಉಳಿಸಿಕೊಳ್ಳಬೇಕಾಗಿತ್ತು ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮತ್ತೆ ಕಮಲ ಹಿಡಿದಿರುವ ಜಗದೀಶ್ ಶೆಟ್ಟರ್ ಅವರು ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಡೀಸೆಂಟ್ ಜಂಟಲ್ ಮ್ಯಾನ್. ಅವರನ್ನ ನಾವು ಉಳಿಸಿಕೊಳ್ಳಬೇಕಾಗಿತ್ತು.
ಶೆಟ್ಟರ್ ಬಿಟ್ಟು ಹೋಗಿದ್ದಾರೆ ಅವರಿಗೆ ಒಳ್ಳೆಯದಾಗಲಿ. ಬೇರೆ ಯಾರು ಪಕ್ಷ ಬಿಟ್ಟು ಹೋಗುತ್ತಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಗುಪ್ತಚಾರ ಇಲಾಖೆ ನನ್ನ ಹತ್ತಿರ ಇಲ್ಲ. ಹಾಗಾಗಿ ಹೇಳಲು ಆಗಲ್ಲ ಎಂದರು.
ಆರ್.ಅಶೋಕ್ ಪಾಪ ತಿರುಕನ ಕನಸು ಕಾಣುತ್ತಿದ್ದಾರೆ. ಅವರಿಗೆ ಆದಷ್ಟು ಬೇಗ ಮುಖ್ಯಮಂತ್ರಿ ಆಗುವ ಆಸೆ. ಅದಕ್ಕಾಗಿ ಬಹಳಷ್ಟು ಜನ ಸರತಿಯಲ್ಲಿ ನಿಂತಿದ್ದಾರೆ ಹಾಗಾಗಿ ಅವರ ಆಸೆ ಪೂರೈಸಲ್ಲ. ಅವರ ಆಸೆ ತಿರುಕನ ಕನಸಾಗೇ ಇರುತ್ತೆ. ಲೋಕಸಭಾ ಚುನಾವಣೆಗೆ ನನ್ನ ಹೆಸರು ಎಲ್ಲಿಯೂ ಪ್ರಸ್ತಾಪ ಇಲ್ಲ ಎಂದು ಹೇಳಿದರು.
ಇದೇ ವೇಳೆ ಕೆರಗೋಡು ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಬಿಕೆಹೆಚ್, ಕೆರಗೋಡು ಘಟನೆ ಬಿಜೆಪಿ ಗುಪ್ತ ಕಾರ್ಯಸೂಚಿ ಹಿಡನ್ ಅಜೆಂಡಾ. ನಾಗಪುರ್ದ ಆರ್ಎಸ್ಎಸ್ ಕಚೇರಿಯಲ್ಲಿ 50 ವರ್ಷಗಳ ಕಾಲ ರಾಷ್ಟ್ರಧ್ವಜ ಹಾರಿಸಿಲ್ಲ. ಈಗ ಕೆರಗೋಡಲ್ಲಿ ರಾಷ್ಟ್ರ ಧ್ವಜ ಹಾರಿಸಲು ಪರ್ಮಿಷನ್ ತೆಗೆದುಕೊಂಡು ಭಗವಾಧ್ವಜ ಹಾರಿಸಿದ್ದಾರೆ. ಅಲ್ಲಿ ಕೋಮುಸೌಹರ್ದ ಮತ್ತು ಶಾಂತಿ ಕದಡಲು ಮಾಡಿದ ಪ್ರಯತ್ನ ಎಂದು ವಾಗ್ದಾಳಿ ನಡೆಸಿದರು.