ಬೆಂಗಳೂರು:- ಶೆಟ್ಟರ್ ನಂಬಿಕೆ ದ್ರೋಹ ಮಾಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಅವರ ಆಡಿದ ಮಾತುಗಳು ನಂಬಿ ಮತ್ತು ಹಿರಿತನಕ್ಕೆ ಗೌರವ ನೀಡಿ, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮೂಲ ಅಭ್ಯರ್ಥಿ ಸುಲಭವಾಗಿ ಗೆಲ್ಲುವ ಅವಕಾಶವಿದ್ದರೂ ಅದನ್ನು ಶೆಟ್ಟರ್ ಅವರಿಗೆ ಬಿಟ್ಟುಕೊಡಲಾಯಿತು.
ಅದರೆ ಶೆಟ್ಟರ್ 35,000 ಮತಗಳ ಅಂತರದಿಂದ ಸೋತರು. ಆಗಲೂ ಕಾಂಗ್ರೆಸ್ ಅವರನ್ನು ಬಿಟ್ಟುಕೊಡದೆ, ಅವರ ವಯಸ್ಸಿಗೆ ಮನ್ನಣೆ ನೀಡಿ ವಿಧಾನ ಪರಿಷತ್ ಸದಸ್ಯನಾಗಿ ನೇಮಕ ಮಾಡಿತು ಎಂದು ಶಿವಕುಮಾರ್ ಹೇಳಿದರು.
ಕಳೆದ 2-3 ತಿಂಗಳಿಂದ ಅವರು ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದ ವಿಷಯ ತನ್ನ ಗಮನಕ್ಕೆ ಬಂದಿತ್ತು ಎಂದ ಅವರು, ನಿನ್ನೆ ಬೆಳಗ್ಗೆಯೂ ಅವರೊಂದಿಗೆ ಮಾತಾಡಿದ್ದೆ ಎಂದರು.