ಬಳ್ಳಾರಿ : ಜಗದೀಶ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರ ಹಿನ್ನೆಲೆಯಲ್ಲಿ ಕಂಪ್ಲಿಯಲ್ಲಿ ಶಾಸಕ ಜೆಎನ್ ಗಣೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಶೆಟ್ಟರ್ ಬಿಜೆಪಿ ಗೆ ಸೇರ್ಪಡೆ ಯಾದ್ರೆ ಆತಂಕ ಪಡುವ ಅವಶ್ಯಕತೆ ಏನಿದೆ ನಮಗೆ ಯಾವ ಆತಂಕವೂ ಇಲ್ಲ, ಶೆಟ್ಟರ್ ಹೋದ್ರೆ 136 ಜನರು ಹೋಗಿ ಬಿಡ್ತಾರಾ..? ಜಗದೀಶ ಅವರ ಜಾಗದಲ್ಲಿ ನಾನಿದ್ರೆ ರಾಜಕೀಯವಾಗಿ ಮನೇಲಿರ್ತಾಯಿದ್ದೆ ಮಾಜಿ ಸಿ ಎಂ ಅಂತ ಅವರಿಗೆ ಟಿಕೇಟ್ ಕೊಟ್ಟು, ಸೋತ ಮೇಲು ಎಮ್ ಎಲ್ ಸಿ ಮಾಡಿದ್ರು ಇಷ್ಟೆಲ್ಲ ಮಾಡಿದ್ರು ಪಕ್ಷ ಬಿಟ್ಟು ಹೋಗ್ತಾರೆ ಅಂದ್ರೆ ಅದು ಅವರ ತಪ್ಪು ನಿರ್ಧಾರ ಕಾಂಗ್ರೆಸ್ ಪಕ್ಷ ಇವರಿಗೆ ಎಷ್ಟೆಲ್ಲ ಜವಾಬ್ದಾರಿಯನ್ನ ಕೊಟ್ಟಿದ್ದಾರೆ
ಇಷ್ಟೆಲ್ಲ ಆದ ಮೇಲೆ ಪಕ್ಷ ಬಿಟ್ಟು ಹೋಗ್ತಾರೆ ಅದ್ರೆ ರಾಜ್ಯದ ಜನತೆ ಅವರ ಮೇಲೆ ಎಷ್ಟು ಗೌರವ ಇಟ್ಕೊತಾರೆ ಅಂತ ಗೊತ್ತಾಗುತ್ತೆ ಹತ್ತು ವರ್ಷ ಆಳಿದ ಬಿಜೆಪಿ ಇಷ್ಟು ಕುಣಿಬೇಕಾದ್ರೆ 50 ವರ್ಷ ಕಾಂಗ್ರೆಸ್ ಆಳಿದೆ, ಏನೇನು ಕೊಡುಗೆ ಕೊಟ್ಟಿದೆ ಎಂದು ಜನರಿಗೆ ಗೊತ್ತಿದೆ ದೇಶದಲ್ಲಿ ಮೋದಿ ಅಲೆ ಕಡಿಮೆಯಾಗಿದೆ, ದೇವರಾದ ರಾಮನನ್ಮ ಮುಂದಿಟ್ಕೊಂಡು ರಾಜಕಿಯ ಮಾಡ್ತಿದ್ದಾರೆ
ಹಿಂಗೆ ಇವರು ಹೊರಟ್ರೇ ರಾಮನಿಗೂ ಬೇಜಾರಾಗತ್ತೆ ದೇವರನ್ನ ಜಾತಿಯನ್ನ ಇಟ್ಕೊಂಡು ರಾಜಕಾರಣ ಮಾಡಬಾರದು ಇವರಿಗೆ ರಾಮನೂ ಕನಸಲ್ಲಿ ಬಂದು ಹೇಳ್ತಾನೆ ಸಾಕ್ರಪ್ಪ ನನ್ಮ ಕೈ ಬಿಡ್ರಿ ಎಂದು ನಾನು ರಾಮ ಆಂಜನೇಯ ಎಲ್ಲಾ ದೇವರ ಭಕ್ತನೂ ನಾನು
ಜಗದೀಶ ಶೆಟ್ಟರ್ ರಾಜಕಿಯವಾಗಿ ಬಹಳ ತಪ್ಪು ನಿರ್ದಾರ ತೆಗೆದುಕೊಂಡಿದ್ದಾರೆ ಲಕ್ಷ್ಮಣ ಸವದಿ ಬಿಜೆಪಿ ಸೇರ್ತಾರೆ ಎಂಬ ವಿಚಾರ ಯಾವುದು ಏನೂ ಆಗಲ್ಲ, ಇದು ಬಿಜೆಪಿಯವರನ್ನ ಹಿಡಿದಿಟ್ಕೊಳ್ಳೋಕೆ ಮಾಡ್ತಿರೋದು ಎಮ್ ಪಿ ಚುನಾವಣೆ ಬಂತು ನಮ್ಮ ಜೊತೆ ಮಾತಾಡ್ತಾಯಿದ್ರು, ಹಿಡಿದಿಟ್ಕೊಳೊಕೆ ಹೇಳಿಕೆ ನೀಡ್ತಾಯಿದ್ದಾರೆ
ಕುಮಾರಸ್ವಾಮಿ ಪರಿಸ್ಥಿತಿ ಎಲ್ಲಿಗೆ ಬಂತು…? ತನ್ನ ಸ್ವಂತ ಅಸ್ತಿತ್ವ ಇದೇಯಾ..? ಹೊಡಿದಿಟ್ಕೊಳೊಕೆ ಈ ರೀತಿ ನಾಟಕ ಮಾಡ್ತಿದ್ದಾರೆ ರಾಜ್ಯದ ಜನತೆ ನಮಗೆ ಜವಾಬ್ದಾರಿ ಕೊಟ್ಟಿದ್ದಾರೆ, 5 ವರ್ಷ ಆಡಳಿತ ಮಾಡ್ತಿವಿ, ಈ ಲೋಕಸಭೆಗೆ 15 ರಿಂದ 20 ಸೀಟ್ ಗೆಲ್ತಿವಿ ಜಗದೀಶ ಶೆಟ್ಟರ್ ಹೋದ್ರೂ ನಮಗೇನು ಎಫೆಕ್ಟ್ ಆಗಲ್ಲ ಜಗದೀಶ ಶೆಟ್ಟರ್ ಬಿಜೆಪಿ ಹೋದ್ರೆ ಅಲ್ಲಿ ಅವರ ವಿರುದ್ದ ಇದ್ದವರು ಬಂದ್ರು ಬರಬಹುದು, ಬಂದ್ರು ಆಶ್ಚರ್ಯ ಪಡೋಹಾಗಿಲ್ಲ ಬಿಜೆಪಿ ಎಮ್ ಎಲ್ ಎ ಗಳು ಆಡಳಿತ ಪಕ್ಷಕ್ಕೆ ಹೋಗಬಾರದು ಎಂದು ಮಾಡ್ತಿದ್ದಾರೆ ಸವದಿಯವರಿಗೆ ಒಂದು ಜಿದ್ದಿದೆ, ಅವರಿಗೆ ಗೌರವ ಇದೆ ಅನಸತ್ತೆ, ಶೆಟ್ಟರ್ ಗೆ ಕೂಡಾ ಹಾಗೆ ಇದೆ ಅಂತ ಭಾವಿಸಿದ್ದೆ ಆದ್ರೆ ಈಗ ಆಶ್ಚರ್ಯ ಆಗ್ತಿದೆ ಎಂದರು.