ಕಲಬುರಗಿ: ಕಾಂಗ್ರೆಸ್ ಪಕ್ಷ ಎಲ್ಲ ರೀತಿಯ ಗೌರವ ಕೊಟ್ರೂ ಜಗದೀಶ್ ಶೆಟ್ಟರ್ ದಿಢೀರ್ ಆಗಿ ಮತ್ತೆ ಬಿಜೆಪಿ ಹೋಗಿರೋದನ್ನ ನೋಡಿದ್ರೆ ಅವರು ಮಾನಸಿಕ ಸ್ತೀಮಿತ ಕಳ್ಕೊಂಡಿದ್ದಾರೆ ಅನ್ಸುತ್ತೆ ಅಂತ ಕಾಂಗ್ರೆಸ್ MLC ತಿಪ್ಪಣ್ಣಪ್ಪ ಕಮಕನೂರ್ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ಕಮಕನೂರ್ ಬಿಜೆಪಿಯವರ ಹತ್ರ ಯಾರು ಇರೋದಿಲ್ವೋ ಅಂಥವರಿಗೆ ED ದಾಳಿ ಮಾಡೋ ಬೆದರಿಕೆ ಹಾಕ್ತಾರೆ.ಯಾಕಂದ್ರೆ ED ನೇ ಅವರ ಮನೆದೇವ್ರು ಅಂತ ಹೇಳಿದ್ರು..ಒಟ್ಟಾರೆ ಶೆಟ್ಟರ್ ಕಾಂಗ್ರೆಸ್ ಬಿಟ್ಟು ಹೋಗಿದ್ದನ್ನ ನಾನು ಖಂಡಿಸ್ತೇನೆ ಎಂದು ಹೇಳಿದರು.