ಬೆಳಗಾವಿ : ಕುರಿ ಮೇಯಿಸುವ ಕುರಿಗಾಯಿ ಕಾಲು ಕತ್ತರಿಸಿದ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅರಭಾವಿ-ಸಂಗನಕೇರಿ ಗ್ರಾಮದಲ್ಲಿ ನಡೆದಿದೆ. ಕುರಿ ಕಳ್ಳತನ ಪ್ರಶ್ನಿಸಿದ್ದಕ್ಕೆ ಆತನ ಬಳಿಯಿದ್ದ ಕೊಡ್ಲಿ ಕಸಿದುಕೊಂಡು ಹಲ್ಲೆ ಮಾಡಿ ಪರಾರಿ ಪರಾರಿಯಾಗಿದ್ದಾನೆ.
ಹುಕ್ಕೇರಿ ತಾಲೂಕಿನ ಗಸ್ತಿ ಗ್ರಾಮದ ಬಸಪ್ಪ ಗುರವನ್ನವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಲ್ಲಿಕ್ ಸಾಬ್ ಮುಲ್ತಾನಿ ಎಂಬಾತನ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ಘಟನೆ ನಡೆದು ನಾಲ್ಕು ದಿನಗಳಾದರೂ ಪೊಲೀಸರು ದೂರು ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ. ಘಟಪ್ರಭಾ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.