ಯಾದಗಿರಿಯಲ್ಲಿ ಮುಂದುವರೆದ ನವಜಾತ ಶಿಶುಗಳ ಸರಣಿ ಸಾವು ಮುಂದುವರೆದಿದೆ. ಎರಡು ವಾರದ ಅಂತರದಲ್ಲೇ ಮೂರು ನವಜಾತ ಶಿಶುಗಳ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಗುರುಮಠಕಲ್ ಪಟ್ಟಣ ಪಕ್ಕದ ಅನಪೂರ ಗ್ರಾಮದ ಗರ್ಭಿಣಿ ಗಾಯತ್ರಿಯವರಿಗೆ ಬುಧವಾರ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸಂಬಂಧಿಕರು ಕೂಡಲೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದರು.
KPSC Recruitment: ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: ತಿಂಗಳಿಗೆ ₹ 48,000 ಸಂಬಳ – ಇಂದೇ ಅರ್ಜಿ ಸಲ್ಲಿಸಿ
ಆಸ್ಪತ್ರೆಗೆ ದಾಖಲಾಗುವಷ್ಟರಲ್ಲಿ ಮಗುವಿನ ಅರ್ಧ ದೇಹ ಗರ್ಭದಿಂದ ಹೊರಗೆ ಬಂದಿತ್ತು. ಕೂಡಲೇ, ಯಾದಗಿರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ತೀರ್ಮಾನಿಸಿತ್ತಾದರೂ, ಆ್ಯಂಬುಲೆನ್ಸ್ ಸೇವೆ ಇಲ್ಲದ ಕಾರಣ ಸಿಬ್ಬಂದಿ ಸಮುದಾಯ ಕೇಂದ್ರದಲ್ಲೇ ಹೆರಿಗೆ ಮಾಡಿದರು. ಆದರೆ, ಹೆರಿಗೆಯಾದ ಕೆಲವೇ ಕ್ಷಣಗಳಲ್ಲಿ ನವಜಾತ ಶಿಶು ಮೃತಪಟ್ಟಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಬಿರಾದಾರ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.