ತಿರುವನಂತಪುರಂ:- 2022 ರಲ್ಲಿ ತನ್ನ ಬಾಯ್ ಫ್ರೆಂಡ್ ಶರೋನ್ ರಾಜ್ಗೆ ಮಾರಕ ಕಳೆನಾಶಕ ಬೆರೆಸಿದ ಆಯುರ್ವೇದ ಮಿಶ್ರಣವನ್ನು ಕುಡಿಸಿ ಕೊಲೆ ಮಾಡಿದ ಆರೋಪದ ಮೇಲೆ ಕನ್ಯಾಕುಮಾರಿ ಜಿಲ್ಲೆಯ ರಾಮವರ್ಮಂಚಿರದ 24 ವರ್ಷದ ಮಹಿಳೆ ಗ್ರೀಷ್ಮಾಗೆ ನೆಯ್ಯಟ್ಟಿಂಕರಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಕೊಕೇನ್ ಮತ್ತು ಗಾಂಜಾ ಸೇರಿ 36 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ ಕಸ್ಟಮ್ಸ್!
ತನ್ನ ಪ್ರಿಯಕರನ ಕೊಂದಿದ್ದ ಕೇರಳದ ಯುವತಿ ಮತ್ತು ಆಕೆಯ ಚಿಕ್ಕಪ್ಪನಿಗೆ ಮರಣ ದಂಡನೆ ವಿಧಿಸಿತ್ತು. ಮರಣ ದಂಡನೆಯ ತೀರ್ಪನ್ನು ಬರೆದ ಬಳಿಕ ನ್ಯಾಯಾಧೀಶರು ಅದೇ ಕ್ಷಣದಲ್ಲಿ ಆ ಪೆನ್ನಿನ್ ನಿಬ್ನ್ನು ಮುರಿದ್ರು. ಇದೊಂದೆ ಪ್ರಕರಣವಲ್ಲ ಯಾವುದೇ ಪ್ರಕರಣದಲ್ಲಾದರೂ ಸಹ ನ್ಯಾಯಾಧೀಶರು ಮರಣದಂಡನೆ ತೀರ್ಪು ಬರೆದ ಬಳಿಕ ಆ ಪೆನ್ನಿನ ನಿಬ್ಬನ್ನು ಮುರಿತಾರೆ.. ಹಾಗಾದರೆ ಹೀಗೆ ಪೆನ್ ನಿಬ್ ಮುರಿಯೋದು ಯಾಕೆ..? ಇದರ ಹಿಂದಿನ ರಹಸ್ಯವೇನು ಅನ್ನೋದನ್ನು ಹೇಳ್ತೀವಿ.. ಅದಕ್ಕೂ ಮುನ್ನ ನೀವಿನ್ನು ನಮ್ಮ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿಲ್ಲ ಅಂದರೆ ಈ ಕೂಡಲೇ ಸಬ್ ಸ್ಕ್ರೈಬ್ ಮಾಡಿ.. ತಾಜಾ ಸುದ್ದಿಗಳ ಅಪ್ಡೇಟ್ ಮಾಡಿ..
ಮೊದಲಿಗೆ ಏನಿದು ಶರೋನ್ ರಾಜ್ ಕೊಲೆ ಪ್ರಕರಣ ಅನ್ನೋದನ್ನು ನೋಡದೋದರೆ 2 ವರ್ಷದ ಹಿಂದೆ ಗ್ರೀಷ್ಮಾ ತನ್ನ ಪ್ರಿಯತಮನಿಗೆ ವಿಷ ನೀಡಿದ್ದಳು. ಗ್ರೀಷ್ಮಾ ಮತ್ತು ಶರೋನ್ ರಾಜ್ ಇಬ್ಬರು ಸಹ ಪರಸ್ಪರ ಪ್ರೀತಿಸ್ತಿದ್ರು. ಆದರೆ ಗ್ರೀಷ್ಮಾಗೆ ಒಂದೂ ಒಳ್ಳೆ ಕಡೆಯಿಂದ ಸಂಬಂಧ ಬಂದಿತ್ತು. ವರ ಸೇನಾಧಿಕಾರಿಯಾಗಿದ್ರಿಂದ ಗ್ರೀಷ್ಮಾ ಕೂಡ ಒಪ್ಪಿಗೆ ಕೊಟ್ಟಿದ್ಲು ಇಬ್ಬರ ಮದುವೆಯೂ ನಿಶ್ಚಯವಾಯ್ತು. ಇದಕ್ಕಾಗಿ ತನ್ನ ಪ್ರಿಯತಮ ಶರೋನ್ ಜೊತೆಗೆ ಬ್ರೇಕಪ್ ಮಾತನ್ನು ಹೇಳಿದ್ದಾಳೆ. ಆದರೆ ಶರೋನ್ ಇದಕ್ಕೆ ಒಪ್ಪದೇ ಇದ್ದಾಗ ಒಂದಲ್ಲ ಎರಡು ಬಾರಿ ಅವನನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾಳೆ. ಮೊದಲ ಬಾರಿ ಫೇಲ್ ಆಗಿ, ಎರಡನೇ ಬಾರಿಗೆ ಇದರಲ್ಲಿ ಯಶಸ್ವಿಯಾಗಿದ್ದಾಳೆ. ಕಳೆನಾಶಕ ಆಯುರ್ವೇದ ಟಾನಿಕ್ ನೀಡಿ, ಶರೋನ್ ಹತ್ಯೆಗೈದಿದಿದ್ದಾಳೆ. 11 ದಿನಗಳ ಕಾಲ ಬಹುಅಂಗಾಂಗ ವೈಫಲ್ಯದಿಂದ ನರಳಾಡಿದ್ದ ಶರೊನ್ ಆ ಬಳಿಕ ಉಸಿರು ಚೆಲ್ಲಿದ್ದ.. ಈ ಪ್ರೀತಿ ಕೊಂದ ಕೊಲೆಗಾತಿಗೆ ಕೋರ್ಟ್ ಮರಣದಂಡನೆಯ ಶಿಕ್ಷೆ ವಿಧಿಸಿದೆ.
ಅದೂ ಸರಿ.. ಆದರೆ ಮರಣದಂಡನೆ ಶಿಕ್ಷೆ ಬರೆದ ಬಳಿಕ ಫೆನ್ನಿನ ನಿಬ್ ಮುರಿಯೋದ್ಯಾಕೆ ಅನ್ನೋ ಪ್ರಶ್ನೆ.. ಇದಕ್ಕೆ ಕಾರಣವಿದೆ.. ಈ ರೀತಿ ಗಲ್ಲು ಶಿಕ್ಷೆ ಬರೆದ ಬಳಿಕ ಪೆನ್ನಿನ ನಿಬ್ ಮುರಿಯೋದು ನ್ಯಾಯಾಂಗದಲ್ಲಿ ಸಾಂಕೇತಿಕ ಕ್ರಿಯೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಒಂದು ಮರಣದಂಡನೆಗೆ ಗುರಿಯಾಗುವಂತ ಅಪರಾಧ ಮಾಡಿದ್ದು ಸಾಬೀತಾಗಿದ್ದು, ಮುಂದೆ ಇಂಥ ಕೃತ್ಯವನ್ನು ಯಾರು ಮಾಡಬಾರದು. ಆ ಫೆನ್ನನ್ನು ಬಳಸಲು ಬಾರದು. ಅಂದರೆ ಮತ್ತೆ ಇಂಥ ಕೃತ್ಯ ಜರುಗಬಾರದು ಎಂಬ ಅರ್ಥ..
ಇನ್ನೊಂದು ಮರಣದಂಡನೆಯ ತೀರ್ಪು ನೀಡುವ ಕಾಗದಪತ್ರಗಳಿಗೆ ಸಹಿ ಹಾಕುವ ಈ ಪೆನ್ನು ಒಂದು ಜೀವವನ್ನು ಕೊನೆಗೊಳಿಸುವ ಅತಿ ಸೂಕ್ಷ್ಮ ಮತ್ತು ಅನಿವಾರ್ಯವಾದ ಕಾನೂನಿನ ಪಾಲನೆಯ ಪ್ರತ್ಯಕ್ಷ ಪಾಲುದಾರನಾಗಿದೆ. ಒಬ್ಬ ವ್ಯಕ್ತಿಯ ಜೀವವನ್ನು ಕಳೆಯುವ ‘ಕಳಂಕ’ ಹೊತ್ತಿರುತ್ತದೆ. ಈ ಪೆನ್ನಿಗೆ ‘ಕಳಂಕಿತ’ ಅಥವಾ “Tainted” ಎಂದು ಕರೆಯಲಾಗುತ್ತದೆ. ಕಳಂಕಿತ ವ್ಯಕ್ತಿಗೆ ಕಳಂಕಿತ ಪೆನ್ನಿನಿಂದ ಶಿಕ್ಷೆ ನೀಡಿ ಈ ಕಳಂಕಗಳನ್ನು ನಿವಾರಿಸುವ ಮೂಲಕ ನ್ಯಾಯಾಧೀಶರು ತಮ್ಮ ಪಾಲಿನ ತೀರ್ಪನ್ನು ಒದಗಿಸುವ ಸಂಕೇತವೂ ಆಗಿದೆ.
ಸಾಮಾನ್ಯವಾಗಿ ಎಲ್ಲಾ ಮರಣದಂಡನೆ ನೀಡುವುದು ಕೆಲವೇ ಪ್ರಕರಣಗಳಲ್ಲಿ . ಗಲ್ಲು ಶಿಕ್ಷೆಯಂತಹ ತೀರ್ಪನ್ನು ನೀಡಲು ನ್ಯಾಯಾಧೀಶರು ಎಲ್ಲಾ ಸಾಕ್ಷಿಗಳನ್ನು, ವಿವರಗಳನ್ನು, ಆಧಾರಗಳನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿ ನ್ಯಾಯಾಂಗದ ಕಾಯ್ದೆಗಳನ್ನು ಸೂಕ್ತವಾಗಿ ಒರೆಹಚ್ಚಿ ಅಂತಿಮವಾಗಿ ತಮ್ಮ ತೀರ್ಮಾನವನ್ನು ಮಂಡಿಸಿರುತ್ತಾರೆ. ಈ ತೀರ್ಮಾನವನ್ನು ನೀಡಿದ ಬಳಿಕ ಬೇರೆ ಯಾರೂ ಇದನ್ನು ಬದಲಿಸದಂತೆ, ಸ್ವತಃ ತೀರ್ಪು ನೀಡಿದ ನ್ಯಾಯಾಧೀಶರೇ ಬದಲಿಸದಂತೆ ತೀರ್ಪಿಗೆ ಸಹಿ ಹಾಕಿದ ಪೆನ್ನಿನ ನಿಬ್ಬನ್ನು ಮುರಿಯಲಾಗುತ್ತದೆ.
ಮರಣದಂಡನೆಯಂತಹ ಶಿಕ್ಷೆ ಪಡೆದಿರಬೇಕಾದರೆ ಆರೋಪಿ ನಡೆಸಿದ ಕೃತ್ಯ ಅಕ್ಷಮ್ಯವಾಗಿದ್ದು ಇದನ್ನು ಇನ್ನಾರೂ ಮತ್ತೊಮ್ಮೆ ನಡೆಸದಂತೆ ಸೂಚಿಸಲು ಕೂಡ ನಿಬ್ಬನ್ನು ಮುರಿಯಲಾಗುತ್ತದೆ. ಅಂದರೆ ಈ ಕೃತ್ಯ ಮುಂದೆಂದೂ ಯಾರಿಂದಲೂ ನಡೆಯಬಾರದು ಎಂಬುದೇ ನ್ಯಾಯಾಧೀಶರ ಆಶಯವಾಗಿರುತ್ತದೆ. ಗಲ್ಲು ಶಿಕ್ಷೆ ಮರಣದಂಡನೆ ವಿಧಿಸುವುದು ನ್ಯಾಯಾಲಯಕ್ಕೂ ಇಷ್ಟವಿಲ್ಲದ, ಆದರೆ ಕಾನೂನಿಗೆ ತಲೆಬಾಗಬೇಕಾದಾಗ ಅನಿವಾರ್ಯತೆಯ ದುಃಖಕರ ವಿಷಯವಾಗಿದ್ದು ಪೆನ್ನಿನ ನಿಬ್ಬನ್ನು ಮುರಿಯುವ ಮೂಲಕ ಈ ದುಃಖವನ್ನು ತೋರ್ಪಡಿಸುವ ಕ್ರಮವೂ ಆಗಿದೆ. ಗಲ್ಲು ಶಿಕ್ಷೆ ವಿಧಿಸಿದ ಬಳಿಕ ಪೆನ್ ನಿಬ್ ಮುರಿಯೋದು ನಮಗೆ ಒಂದು ಕ್ರಿಯೆ ಆದರೆ, ಅದರ ಹಿಂದೆ ಹಲವು ಅರ್ಥಗಳಂತೂ ಅಡಕವಾಗಿರುವುದು ನಿಜ…