ಪ್ರತಿಯೊಬ್ಬರಿಗೂ ಅವರ ಕರ್ಮಕ್ಕೆ ತಕ್ಕಂತೆ ಫಲ ನೀಡುವ ಶನಿಯ ನೇರ ಸಂಚಾರದಿಂದ ಕೆಲವರ ಜೀವನದಲ್ಲಿ ಕೆಟ್ಟ ಸಮಯ ಸರಿದು ಒಳ್ಳೆಯ ಸಮಯ ಆರಂಭವಾಗಲಿದೆ.
ಆದಾಯದ ಮೂಲಗಳು ಹೆಚ್ಚಾಗಲಿದೆ. ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ಜನರಿಗೆ ಯಶಸ್ಸು. ಮಕ್ಕಳಿಂದ ಶುಭ ವಾರ್ತೆ, ಮನೆಯಲ್ಲಿ ಸುಖ-ಸಂತೋಷ ವೃದ್ಧಿಯಾಗಲಿದೆ
ನೀವು ಒಳ್ಳೆಯ ಕೆಲಸ, ಒಳ್ಳೆಯ ಅಭ್ಯಾಸಗಳನ್ನು ಹೊಂದಿದ್ದರೆ ಶನಿ ಯಾವತ್ತೂ ನಿಮ್ಮ ಬೆನ್ನು ಹತ್ತೋದಿಲ್ಲ, ಬದಲಾಗಿ ನಿಮಗೆ ಸಾಕೆನ್ನುವಷ್ಟು ಒಳ್ಳೆಯದನ್ನೇ ಅನುಗ್ರಹಿಸುತ್ತಾನೆ.
ತಾಳ್ಮೆ ಮತ್ತು ಶಿಸ್ತನ್ನು ಅಭ್ಯಾಸ ಮಾಡಿ
ಶನಿಯು ಸಮಯ, ತಾಳ್ಮೆ ಮತ್ತು ಶಿಸ್ತುಗಳೊಂದಿಗೆ ಸಂಬಂಧ ಹೊಂದಿರುವುದರಿಂದ, ಈ ಗುಣಗಳನ್ನು ಅಳವಡಿಸಿಕೊಳ್ಳುವುದು ಶನಿಯ ಅನುಗ್ರಹ ಪಡೆಯಲಿರುವ ಸರಳ ಮಾರ್ಗವಾಗಿದೆ.
ದಿನನಿತ್ಯ ಮಾಡೋ ಕೆಲಸಗಳನ್ನು ಮಾಡೋದು, ಶಿಸ್ತು, ಬದ್ಧತೆಯಿಂದ ಗುರಿ ಸಾಧನೆಗೆ ಶ್ರಮಿಸುವುದು, ಅಡ್ಡ ದಾರಿ ಹಿಡಿಯದಿರುವಂತಹ ಅಭ್ಯಾಸಗಳು ಶನಿಗೆ ಮೆಚ್ಚುಗೆಯಾಗುತ್ತವೆ
ಶನಿಯು ನಮ್ರತೆ ಮತ್ತು ಸಹಾಯ ಮಾಡುವ ಗುಣಗಳಿಗೆ ಬೇಗ ಆಕರ್ಷಿತನಾಗುತ್ತಾನೆ. ನೀವೂ ಕೂಡ ಶನಿಯ ಕೃಪಕಟಾಕ್ಷ ಪಡೆಯಬೇಕು ಎಂದರೆ, ಕೈಲಾಗದವರಿಗೆ ಸಹಾಯ ಮಾಡಿ.
ಅಗತ್ಯವಿರುವವರಿಗೆ ದಾನ ಮಾಡಿ ಮತ್ತು ಜನರಿಗೆ ವಿಸ್ವಾಸ, ಪ್ರೀತಿ, ದಯೆಯನ್ನು ತೋರುವ ಅಭ್ಯಾಸ ರೂಢಿಸಿಕೊಳ್ಳಿ. ಮೂಕಪ್ರಾಣಿಗಳಿಗೆ ಮೇವು, ನೀರು ಕೊಡುವುದನ್ನು ಕೂಡ ಅಭ್ಯಾಸ ಮಾಡಿಕೊಳ್ಳಿ.
ಕಪ್ಪು ಅಥವಾ ಗಾಢ ನೀಲಿ ಬಣ್ಣವನ್ನು ಧರಿಸಿ
ವೈದಿಕ ಜ್ಯೋತಿಷ್ಯದಲ್ಲಿ, ಕಪ್ಪು ಮತ್ತು ಕಡು ನೀಲಿ ಬಣ್ಣಗಳು ಶನಿಯ ನೆಚ್ಚಿನ ಬಣ್ಣಗಳು. ಆದ್ದರಿಂದ ಈ ಬಣ್ಣಗಳನ್ನು ಧರಿಸಿ. ವಿಶೇಷವಾಗಿ ಶನಿವಾರದಂದು ಈ ಬಟ್ಟೆ ಧರಿಸುವುದು ಶನಿಯ ಆಶೀರ್ವಾದ ಪಡೆಯಲು ಇರುವ ಸುಲಭ ಮಾರ್ಗ
ಶನಿ ಮಂತ್ರಗಳನ್ನು ಪಠಿಸಿ
ಶನಿ ಮಂತ್ರಗಳನ್ನು ಪಠಿಸುವುದು ಅಥವಾ ಕೇಳುವುದು ಶನಿ ಗ್ರಹದ ಅನುಗ್ರಹ ಪಡೆಯಲು ಇರುವ ಪರಿಣಾಮಕಾರಿ ಮಾರ್ಗವಾಗಿದೆ. ಶನಿಯ ಅತ್ಯಂತ ಜನಪ್ರಿಯ ಮಂತ್ರವಾದ “ಓಂ ಶಂ ಶನಿಚರಾಯ ನಮಃ” ಈ ಮಂತ್ರವನ್ನು 108 ಬಾರಿ ಪಠಿಸುವುದರಿಂದ ಶನಿಯ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ವಿಶೇಷವಾಗಿ ಶನಿವಾರ ಈ ಮಂತ್ರವನ್ನು ಪಠಿಸೋದನ್ನು ಮರೆಯದಿರಿ.
ಶನಿವಾರ ಉಪವಾಸ ಮಾಡಿ
ಶನಿ ದೇವರ ವಾರ ಅಂತಾನೇ ಪರಿಗಣಿಸಲಾಗಿರುವ ಶನಿವಾರದಂದು ಹಲವು ಕೆಲಸಗಳನ್ನು ಮಾಡುವ ಮೂಲಕ ದೇವರ ಅನುಗ್ರಹವನ್ನು ಪಡೆಯಬಹುದು.
ಅದರಲ್ಲಿ ಉಪವಾಸ ಕೂಡ ಒಂದು. ಉಪ್ಪು ಮತ್ತು ಹೆವಿ ಆಹಾರವನ್ನು ತಿನ್ನದೇ ಸರಳ ಉಪವಾಸ ಮಾಡುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು.
ಎಣ್ಣೆಯ ದೀಪವನ್ನು ಬೆಳಗಿಸಿ
ಶನಿವಾರ ಸಂಜೆ ಸಾಸಿವೆ ಎಣ್ಣೆಯಿಂದ ದೀಪವನ್ನು ಬೆಳಗಿಸುವುದು ಶನಿಯನ್ನು ಮೆಚ್ಚಿಸಲಿರುವ ಮತ್ತೊಂದು ವಿಧಾನ. ಶನಿ ಯಂತ್ರ ಅಥವಾ ಶನಿ ದೇವರ ವಿಗ್ರಹದ ಮುಂದೆ ಈ ದೀಪವನ್ನು ಹಚ್ಚೋದರಿಂದ ಎಲ್ಲಾ ಒಳ್ಳೆಯದಾಗುತ್ತೆ.
Crime News: ಕ್ಷುಲ್ಲಕ ವಿಚಾರಕ್ಕೆ ಪುಟ್ಟ ಮಗುವಿನ ಕೈ ಮುರಿದ ಕನ್ನಡ ಟೀಚರ್!
ಈ ಸರಳ ಅಭ್ಯಾಸವು ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
ಧ್ಯಾನ ಮತ್ತು ಮೈಂಡ್ಫುಲ್ನೆಸ್ ಅನ್ನು ಅಭ್ಯಾಸ ಮಾಡಿ
ಶನಿಯು ಆತ್ಮಾವಲೋಕನದೊಂದಿಗೆ ಸಂಬಂಧ ಹೊಂದಿರುವುದರಿಂದ, ಧ್ಯಾನ ಅಥವಾ ಸಾವಧಾನತೆಯ ಅಭ್ಯಾಸಗಳಿಗೆ ಸಮಯವನ್ನು ತೆಗೆದುಕೊಳ್ಳುವುದು ಮಾನಸಿಕ ಸ್ಪಷ್ಟತೆಯನ್ನು ತರುತ್ತದೆ ಮತ್ತು ಶನಿಯ ಅನುಗ್ರವೂ ಲಭಿಸುತ್ತದೆ.
ಈ ದೈನಂದಿನ ಅಭ್ಯಾಸಗಳು ಶನಿ ದೇವರ ಅನುಗ್ರಹ ಪಡೆಯಲು ಇರುವ ಸುಲಭ ದಾರಿಯಾಗಿದೆ.
ಪರಿಶ್ರಮ ಮತ್ತು ಗಮನವನ್ನು ಬೆಳೆಸಿಕೊಳ್ಳಿ
ಶನಿಯು ಕಠಿಣ ಪರಿಶ್ರಮವನ್ನು ಗೌರವಿಸುತ್ತಾನೆ, ಆದ್ದರಿಂದ ದೈನಂದಿನ ಜೀವನದಲ್ಲಿ ಈ ಗುಣಗಳನ್ನು ಬೆಳೆಸಿಕೊಳ್ಳೋದರಿಂದ ದೇವರ ಕೃಪೆ ನಿಮ್ಮ ಮೇಲಿರುತ್ತದೆ.
ಮಾಡೋ ಕೆಲಸದಲ್ಲಿ ಪರಿಶ್ರಮ ಹಾಕೋದು, ಗಮನ ನೀಡೋ ನಿಮ್ಮ ಅಭ್ಯಾಸಗಳಿಗೆ ಶನಿ ದೇವರು ಮನಸೋಲುತ್ತಾನೆ, ನೀವು ಮಾಡುವ ಕೆಲಸದಲ್ಲಿ ಕೈ ಹಿಡಿತಾನೆ.
ಶನಿಯ ದೇಗುಲುಗಳಿಗೆ, ವಿಶೇಷವಾಗಿ ಶನಿವಾರದಂದು ಹೋಗಿ ಪ್ರಾರ್ಥನೆ ಮಾಡಿ, ಹೂವುಗಳನ್ನು ಅರ್ಪಿಸಿ. ಅನೇಕ ಜನರು ಕಪ್ಪು ಎಳ್ಳು ಅಥವಾ ಸಾಸಿವೆ ಎಣ್ಣೆಯನ್ನು ನೀಡುತ್ತಾರೆ. ನೀವೂ ಕೂಡ ಹೀಗೆ ಮಾಡಬಹುದು. ಇದರಿಂದ ಶನಿಯ ಆಶೀರ್ವಾದ ನಿಮಗೆ ಲಭಿಸುತ್ತದೆ.
ಶನಿಯು ಕರ್ಮದೊಂದಿಗೆ ಸಂಬಂಧ ಹೊಂದಿದೆ, ಆದ್ದರಿಂದ ಸ್ವಯಂ-ಪ್ರತಿಬಿಂಬ ಮತ್ತು ಹಿಂದಿನ ಕ್ರಿಯೆಗಳಿಗೆ ಕ್ಷಮೆಯಾಚಿಸುವುದು ಶನಿಯನ್ನು ಮೆಚ್ಚಿಸುವ ಮಾರ್ಗವಾಗಿದೆ.