ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ.
2023 ರ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಂತರ ಗಾಯಗೊಂಡಿದ್ದ ಮೊಹಮ್ಮದ್ ಶಮಿ, ಒಂದು ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದರು.
ಮುಂದಿನ ಬಾರಿ ನನ್ನ ನಾಯಕತ್ವದಲ್ಲಿ ಚುನಾವಣೆ ಆಗ ಇದನ್ನ ಉಪಯೋಗಿಸಿ: ಡಿಸಿಎಂ ಡಿಕೆ ಶಿವಕುಮಾರ್
ಈಗ, ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ತಕ್ಷಣ, ಶಮಿ ಮತ್ತೊಮ್ಮೆ ತಮ್ಮ ವೇಗದಿಂದ ಬ್ಯಾಟ್ಸ್ಮನ್ಗಳನ್ನು ಬೆರಗುಗೊಳಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿಯೇ 5 ವಿಕೆಟ್ಗಳನ್ನು ಕಬಳಿಸುವ ಮೂಲಕ ಶಮಿ ಎದುರಾಳಿ ತಂಡದಲ್ಲಿ ನಡುಕು ಹುಟ್ಟಿಸಿದ್ದಾರೆ.
2013 ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಮೊಹಮ್ಮದ್ ಶಮಿ, ತಮ್ಮ 12 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತಿದ್ದಾರೆ. 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತೀಯ ತಂಡದಲ್ಲಿದ್ದರೂ, ಶಮಿಗೆ ಆಡಲು ಅವಕಾಶ ಸಿಗಲಿಲ್ಲ ಆದರೆ ಈ ಬಾರಿ ಅವರು ತಂಡದ ಪ್ರಮುಖ ವೇಗದ ಬೌಲರ್ ಆಗಿ ಕಣಕ್ಕಿಳಿದಿದ್ದು ನಾಯಕನ ನಿರೀಕ್ಷೆಯಂತೆ ಪ್ರದರ್ಶನ ನೀಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿಯೇ ಶಮಿ ಬಾಂಗ್ಲಾದೇಶ ತಂಡದ ಅರ್ಧದಷ್ಟು ಆಟಗಾರರನ್ನು ಏಕಾಂಗಿಯಾಗಿ ಪೆವಿಲಿಯನ್ಗಟ್ಟಿ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ನೀಡಿದರು. ಇನ್ನಿಂಗ್ಸ್ನ ಮೊದಲ ಓವರ್ನಿಂದಲೇ ಶಮಿ ತಮ್ಮ ಪರಾಕ್ರಮವನ್ನು ತೋರಿಸಲು ಪ್ರಾರಂಭಿಸಿದರು. ಓವರ್ನ ಆರನೇ ಎಸೆತದಲ್ಲಿ ಆರಂಭಿಕ ಸೌಮ್ಯ ಸರ್ಕಾರ್ ಅವರ ವಿಕೆಟ್ ಪಡೆದರು.
ನಿರ್ಣಾಯಕ ಸಮಯದಲ್ಲಿ ದಾಳಿಗಿಳಿದ ಶಮಿ, ಜಾಕಿರ್ ಅಲಿ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಸಮಾಧಾನ ತಂದುಕೊಟ್ಟರು. ಈ ಮೂಲಕ 200 ಏಕದಿನ ವಿಕೆಟ್ಗಳನ್ನು ಸಹ ಪೂರ್ಣಗೊಳಿಸಿದರು. ನಂತರ ಶಮಿ ತಂಜಿಮ್ ಹಸನ್ ಸಕಿಬ್ ಮತ್ತು ತಸ್ಕಿನ್ ಅಹ್ಮದ್ ಅವರ ವಿಕೆಟ್ಗಳನ್ನು ಕಬಳಿಸಿ ತಮ್ಮ 5 ವಿಕೆಟ್ಗಳನ್ನು ಪೂರ್ಣಗೊಳಿಸಿದರು.
ಇದರೊಂದಿಗೆ, ಶಮಿ ತಮ್ಮ 104 ಏಕದಿನ ಪಂದ್ಯಗಳ ವೃತ್ತಿಜೀವನದಲ್ಲಿ ಆರನೇ ಬಾರಿಗೆ ಇನ್ನಿಂಗ್ಸ್ನಲ್ಲಿ 5 ವಿಕೆಟ್ಗಳನ್ನು ಪಡೆಯುವ ಸಾಧನೆ ಮಾಡಿದ್ದಾರೆ.