ದೆಹಲಿ: ಟೀಂ ಇಂಡಿಯಾದ (Team India) ಫಾಸ್ಟ್ ಬೌಲರ್ ಮೊಹಮ್ಮದ್ ಶಮಿಯವರು (Mohammad Shami) ಅಪಘಾತಕ್ಕೀಡಾದ ವ್ಯಕ್ತಿಯನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಘಟನೆ ನೈನಿತಾಲ್ನಲ್ಲಿ ನಡೆದಿದ್ದು, ಇದರ ವೀಡಿಯೋವನ್ನು ಶಮಿಯವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
ಇನ್ಸ್ಟಾಗ್ರಾಮ್ನಲ್ಲಿ (Instagram) ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಶಮಿಯವರು ರಸ್ತೆ ಅಪಘಾತಕ್ಕೊಳಗಾದ ಸಂತ್ರಸ್ತರಿಗೆ ಸಹಾಯ ಮಾಡುವುದನ್ನು ಕಾಣಬಹುದಾಗಿದೆ. ಅಲ್ಲದೆ, ಅವನು ತುಂಬಾ ಅದೃಷ್ಟಶಾಲಿ. ದೇವರು ಅವನಿಗೆ 2 ನೇ ಜೀವನವನ್ನು ಕೊಟ್ಟನು. ಅವರ ಕಾರು ನೈನಿತಾಲ್ ಬಳಿಯ ಬೆಟ್ಟದ ರಸ್ತೆಯಿಂದ ನನ್ನ ಕಾರಿನ ಮುಂದೆ ಬಿದ್ದಿತು. ನಾವು ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದೇವೆ. ಇಂದು ಒಬ್ಬರ ಜೀವವನ್ನು ರಕ್ಷಿಸಿದ ಖುಷಿ ನನಗಿದೆ ಎಂದು ಶಮಿ ವೀಡಿಯೋ ಜೊತೆಗೆ ಬರೆದುಕೊಂಡಿದ್ದಾರೆ.