ಕಳೆದ ವಾರ ಸನ್ರೈಸರ್ಸ್ ಹೈದರಾಬಾದ್ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಲಖನೌ ಎದುರು ಆರೆಂಜ್ ಆರ್ಮಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಪ್ಲೇ ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ಮಹತ್ವದ ಪಂದ್ಯ ಎನಿಸಿಕೊಂಡಿದ್ದ ಆ ಮ್ಯಾಚ್ನಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ತವರಿನಲ್ಲಿಯೇ ದಯನೀಯ ಸೋಲು ಅನುಭವಿಸಿತ್ತು.
ಇದರ ಬೆನ್ನಲ್ಲೇ ತಾಳ್ಮೆ ಕಳೆದುಕೊಂಡ ಲಖನೌ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ಮೈದಾನದಲ್ಲಿಯೇ ನಾಯಕನ ಕೆಲವು ನಿರ್ಧಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. 4 ಗೋಡೆಯೊಳಗೆ ನಡೆಯಬೇಕಿದ್ದ ಚರ್ಚೆಯನ್ನು, ಎಲ್ಲರೆದುರು ಸಿಟ್ಟಿನಲ್ಲಿ ಗೋಯೆಂಕಾ ಮಾತನಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
Sanjeev Goenka invited KL Rahul to his home for dinner.
– Both hugged each other. ❤️ pic.twitter.com/Zq2JV8ow5l
— Mufaddal Vohra (@mufaddal_vohra) May 14, 2024
ಇದಷ್ಟೇ ಅಲ್ಲದೇ ಸಂಜೀವ್ ಗೋಯೆಂಕಾ ವರ್ತನೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಟು ಟೀಕೆಗಳು ವ್ಯಕ್ತವಾಗಿದ್ದವು. ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು, ತಮ್ಮ ತಂಡದ ನಾಯಕ ಕೆ ಎಲ್ ಅವರಿಗೆ ತಮ್ಮ ಮನೆಯಲ್ಲಿಯೇ ಡಿನ್ನರ್ ಪಾರ್ಟಿ ನೀಡಿದ್ದಾರೆ. ಈ ವೇಳೆ ಸಂಜೀವ್ ಗೋಯೆಂಕಾ ಅವರನ್ನು ರಾಹುಲ್ ಅಪ್ಪಿಕೊಂಡಿದ್ದಾರೆ. ಈ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.