ಗದಗ: ಸರಿಯಾದ ಸಮಯಕ್ಕೆ ಬಸ್ ಗಳಿಲ್ಲದೇ ತರಗತಿಗಳಿಂದ ವಿದ್ಯಾರ್ಥಿಗಳು ವಂಚಿತರಾಗ್ತಿದ್ದಾರೆ. ಹೌದು ಗದಗ ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದಲ್ಲಿ ಶಾಲಾ ಕಾಲೇಜು ಸಮಯಕ್ಕೆ ಸರಿಯಾದ ಬಸ್ ಗಳಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಬಸ್ ಗಳು ಬಾರದ್ರಿಂದ ಖಾಸಗಿ ವಾಹನಗಳಿಗೆ ದುಡ್ಡು ಕೊಟ್ಟು ಪ್ರಯಾಣಿಸೋ ಪರಿಸ್ಥಿತಿ ನಿರ್ಮಾಣವಾಗಿದೆ.
ತಂದೆ ತಾಯಿ ದುಡಿದ ದುಡ್ಡನ್ನ ಕೊಟ್ಟು ಖಾಸಗಿ ವಾಹನಗಳಲ್ಲಿ ಓಡಾಡೋ ಪರಿಸ್ಥಿತಿ ಅಂತಾ ವಿದ್ಯಾರ್ಥಿಗಳ ಅಳಲು ತೊಡಿಕೊಂಡಿದ್ದಾರೆ. ಸೀಟ್ ಗಳು ಸಿಗದಿರೋ ಕಾರಣ ಬಸ್ ಗಳ ಬಾಗಿಲಲ್ಲಿ ನಿಂತು ಸಂಚರಿಸೋ ಪರಿಸ್ಥಿತಿಯಾಗಿದ್ದು, ಏನಾದ್ರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ ಎಂದು ಶಾಲಾ ಕಾಲೇಜು ಸಮಯಕ್ಕೆ ಬಸ್ ಬಿಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.