ಗದಗ: ಶಕ್ತಿ ಯೋಜನೆ ಎಫೆಕ್ಟ್ʼನಿಂದ ಸಾರಿಗೆ ಸಂಸ್ಥೆ ಬಸ್ ಚಕ್ರದಡಿ ಸಿಲುಕಿ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ನಡೆದಿದೆ. ರಾಘವೇಂದ್ರ (21) ಮೃತ ವಿದ್ಯಾರ್ಥಿಯಾಗಿದ್ದು, ರಾಮದುರ್ಗ ಹೊಸಪೇಟೆ ಬಸ್ ಏರಿ ಕೊಣ್ಣೂರಿನಿಂದ ನರಗುಂದ ಕಾಲೇಜಿಗೆ ಹೊರಟ್ಟಿದ್ದನು.
ಕ್ಯಾರೆಟ್ ಬೆಳೆ ಹರಿಸುತ್ತೆ ಹಣದ ಹೊಳೆ: ಕ್ಯಾರೆಟ್ ಕೃಷಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಬಸ್ ಫುಲ್ ಇದ್ದ ಕಾರಣ ಬಸ್ ನ ಮುಂಭಾಗದ ಬಾಗಿಲಿನಿಂದ ಹತ್ತಲು ಹೋಗಿದ್ದನು. ಈ ವೇಳೆ ಜಾರಿ ಬಿದ್ದಿದ್ದಾನೆ, ಈ ಪರಿಣಾಮ ತಲೆ ಮೇಲೆ ಬಸ್ ಬಸ್ ಹಿಂಬದಿ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ನರಗುಂದ ಪೊಲೀಸರಿಂದ ಪರಿಶೀಲನೆ ನಡೆಸಿದ್ದಾರೆ. ನರಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.