ಬೆಂಗಳೂರು: ನಮ್ಮ ಮೆಟ್ರೋ ಬೆಂಗಳೂರು ನಗರ ಜೀವನಾಡಿ. ನಿತ್ಯ ಲಕ್ಷಾಂತ ಮಂದಿ ಮೆಟ್ರೋ ಹತ್ತಿ ಒಂದು ಕಡೆಯಿಂದ ಮತ್ತೊಂದು ಕಡೆ ‘ಹೋಗ್ತಾರೆ. ಆದ್ರೆ ಇತ್ತೀಚಿಗೆ ಇದೇ ಮೆಟ್ರೋದಲ್ಲಿ ಬ್ಯಾಕ್ ಟು ಬ್ಯಾಕ್ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ಪ್ರಕರಣ ಹೆಚ್ಚಾಗ್ತಿದೆ.ಇದ್ರಿಂದ ಮೆಟ್ರೋ ಹತ್ತೋಕೆ ಮಹಿಳಾ ಪ್ರಯಾಣಿಕರು ಎದುರುತ್ತಿದ್ದಾರೆ. ಆದ್ರೆ ಮಹಿಳಾ ಪ್ರಯಾಣಿಕರಿಗೆ ಸೇಫ್ಟಿ ನೀಡಲು ಇದೀಗ ಮತ್ತೊಂದು ಬೋಗಿಯನ್ನ ಮಹಿಳೆಯರಿಗೆ ಮೀಸಲಿಡಲು ಬಿಎಂಆರ್ಸಿಲ್ ಚಿಂತಿಸಿದೆ.
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟನೆ ನಿಯಂತ್ರಣಕ್ಕೆ ರಾಮಬಾಣವಾಗಿ ಬಂದಿದ್ದೇ ನಮ್ಮ ಮೆಟ್ರೋ. ಮೆಟ್ರೋ ಶುರುವಾದ ಬಳಿಕ ಲಕ್ಷಾಂತರ ಮಂದಿ ಸೇಫ್ ಅಂತ ಮೆಟ್ರೋ ರೈಲು ಹತ್ತಿ ನಗರದಲ್ಲಡೆ ಸುತ್ತಾಡ್ತಾರೆ. ಬಿಎಂಟಿಸಿ ಬಸ್ ಸೇಫ್ ಅಲ್ಲ ಅಂತ ಅದೆಷ್ಟೋ ಜನ ಮೆಟ್ರೋ ಹತ್ತುತ್ತಿದ್ದಾರೆ. ಆದ್ರೆ ಇತ್ತೀಚಿಗೆ ಮೆಟ್ರೋ ಹತ್ತಿ ಓಡಾಟ ನಡೆಸಲು ಮಹಿಳಾ ಪ್ರಯಾಣಿಕರು ಎದುರುತ್ತಿದ್ದಾರೆ. ಕಾರಣ ಮೆಟ್ರೋದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಕೇಸ್..
ಹೌದು ಇತ್ತೀಚಿನ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಮೆಟ್ರೋದಲ್ಲಿ ಕಾಮುಕರ ಕಿರುಕುಳಕ್ಕೆ ಮಹಿಳಾ ಪ್ರಯಾಣಿಕರು ಬೇಸತ್ತಿದ್ದಾರೆ. ಜೊತೆ ಈಗಾಗಲೇ ಒಂದು ಬೋಗಿ ‘ಮಹಿಳೆಯರಿಗೆ ಪ್ರತ್ಯೇಕವಾಗಿ ಇದ್ರೂ ಆತಂಕದಲ್ಲಿ ಮಹಿಳಾ ಪ್ರಯಾಣಿಕರು ಮೆಟ್ರೋದಲ್ಲಿ ಓಡಾಟ ನಡೆಸ್ತಿದ್ಧಾರೆ.ಇದೀಗ ಮಹಿಳಾ ಪ್ರಯಾಣಿಕರ ಆತಂಕ ದೂರ ಮಾಡಲು ಮತ್ತೊಂದು ಮಹಿಳಾ ಬೋಗಿ ವ್ಯವಸ್ಥೆ ಮಾಡಲಾಗಿದೆ.ಆರು ಬೋಗಿಯ ರೈಲಿನಲ್ಲಿ ಎರಡು ಬೋಗಿಗಳನ್ನ ಮಹಿಳೆಯರಿಗೆ ಮೀಸಲಿಡಲು ಚಿಂತನೆ ನಡೆಸಲಾಗಿದೆ.
ಅತ್ಯಂತ ಕಠಿಣವಾದ ಪ್ರವೇಶ ನಿಯಮಗಳು, ರೈಲು ಹತ್ತುವಾಗ ಪಾಲಿಸಬೇಕಾದ ಕ್ರಮಗಳಿಂದ ನಮ್ಮ ಮೆಟ್ರೋ ರೈಲಿನಲ್ಲಿ ಓಡಾಡುವುದು ಅತ್ಯಂತ ಸೆಕ್ಯೂರ್ಡ್ ಅನ್ನುವ ಫೀಲಿಂಗ್ ಇತ್ತು. ಆದರೆ ಮೆಟ್ರೋ ಕನೆಕ್ಟಿವಿಟಿ ಸಿಕ್ಕ ನಂತರ ಜನದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಪ್ರಯಾಣಿಕರು ರೈಲಿನೊಳಗೆ ಹತ್ತಿದ್ದರೆ ಉಸಿರಾಡಲು ಕಷ್ಟ ಪಡುವಂತಾಗಿದೆ. ಎಲ್ಲ ರೀತಿಯ ಜನರು ರೈಲು ಹತ್ತುತ್ತಿರುವುದರಿಂದ ಅಲ್ಲೂ ಲೈಂಗಿಕ ಕಿರುಕುಳ ಜೋರಾಗಿ ಮಾತನಾಡುವುದು, ದಬಾಯಿಸುವುದು ಮೊದಲಾದ ವಿದ್ಯಮಾನಗಳು ನಡೆಯುತ್ತಿವೆ.ಇತ್ತೀಚೆಗಂತೂ ಮಹಿಳೆಯರ ಜತೆ ಅಸಭ್ಯ ವರ್ತನೆ ಕೇಸ್ಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಳ್ಳುವ ಕಾಮುಕರು ಮಹಿಳೆಯರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ. ಮಹಿಳೆಯ ಖಾಸಗಿ ಅಂಗಗಳನ್ನು ಮುಟ್ಟುವುದು, ಪದೇಪದೆ ಮೈ ಮೇಲೆ ಬೀಳುವುದು ಸೇರಿದಂತೆ ನಾನಾ ರೀತಿಯ ಲೈಂಗಿಕ ದೌರ್ಜನ್ಯವನ್ನು ಎಸಗುತ್ತಿದ್ದಾರೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಜನವರಿ 1 ರಂದು ಯುವಕನೊಬ್ಬ ಹಿಂಬದಿಯಿಂದ ಖಾಸಗಿ ಅಂಗವನ್ನ ಮುಟ್ಟಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಯುವತಿಯೊಬ್ಬಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದಳು. ಅಲ್ಲದೆ, ವಿಚಾರ ತಿಳಿದ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಹಿಡಿದಿದ್ದರು. ಈ ವೇಳೆ ಯುವತಿ ಮುಂದೆ ಆತ ತಪ್ಪೊಪ್ಪಿಕೊಂಡಿದ್ದನು.ಇದೇ ರೀತಿ ಹಲವು ಬಾರಿ ನಡೆದುಹೋಗಿವೆ. ಹೀಗಾಗಿ ಮತ್ತೊಂದು ಬೋಗಿಯನ್ನ ಮಹಿಳೆಯರಿಗೆ ಮೀಸಲಿಡಲು ಬಿಎಂಆರ್ಸಿಲ್ ಮುಂದಾಗಿದೆ.
ಸದ್ಯ ಮಹಿಳೆಯರ ಸುರಕ್ಷತೆಗಾಗಿ ಮತ್ತೊಂದು ಬೋಗಿ ಮೀಸಲಿಡಲು ಮನವಿಗಳು ಬಂದಿವೆ. ಈಗಾಗಲೇ ರೈಲಿನಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿಯೊಂದು ಇದೆ. ಇದೀಗ ಮತ್ತೊಂದು ಬೋಗಿ ಮೀಸಲಿಡಬೇಕೆಂದು ಮೆಟ್ರೋಗೆ ಬೇಡಿಕೆ ಬಂದಿವೆ. ಬಿಎಂಆರ್ಸಿಎಲ್ ಕೂಡ ಈ ಬಗ್ಗೆ ಚರ್ಚೆ ನಡೆಸುತ್ತಿದ್ದು, ಶೀಘ್ರದಲ್ಲೇ ಮಹಿಳೆಯರಿಗೆ ಎರಡು ಬೋಗಿ ಮೀಸಲಿಡಲು ಮುಂದಾಗಿದೆ.ಇದರಿಂದ ಮೆಟ್ರೋದಲ್ಲಿ ಇನ್ನಾದ್ರೂ ಲೈಂಗಿಕ ಕಿರುಕುಳ ಕೇಸ್ ನಿಲ್ಲುತ್ತಾವಾ ಅನ್ನೋದನ್ನ ಕಾದುನೋಡಬೇಕಿದೆ